ಲಿಂಗಸುಗೂರು: ದೇವಸ್ಥಾನದ ಭಕ್ತಾಧಿಗಳು ನೀಡುವ ಹಣ ದುರುಪಯೋಗ ಆಗಬಾರದೆಂದು ತಹಶಿಲ್ದಾರರ ಹೆಸರಿನಲ್ಲಿ 1999 ರಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿತ್ತು. ಸಧ್ಯ ದೇವಸ್ಥಾನದ ಅಭಿವೃಧ್ಧಿಗೆ ಹಾಗೂ ತೇರಿನ ಮನೆಯನ್ನು ನಿರ್ಮಿಸುವ ಸಲುವಾಗಿ ಗದ್ದೆಮ್ಮದೇವಿಯ ಸಿಮಿತಿಯವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು.
ಮನವಿ ಹಿನ್ನಲೆಯಲ್ಲಿ ಇಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ಈಚನಾಳ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿದರು. ಈ ವೇಳೆ ತಹಶೀಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿ ಈಗಾಗಲೇ ಬ್ಯಾಂಕ್ ಅಕೌಂಟ್ ನಲ್ಲಿ ಸುಮಾರು 2 ಲಕ್ಷ 30 ಸಾವಿರ ರೂಪಾಯಿ ಹಣ ಜಮಾ ಆಗಿದ್ದು, ಗ್ರಾಮ ಸಭೆ ಮಾಡಿ ಸಾರ್ವಜನಿಕರ ಅಭಿಪ್ರಾಯ ಪಡೆದು ನಮ್ಮಲ್ಲಿರುವ ಹಣವನ್ನು ಶ್ರೀ ಗದ್ದೇಮ್ಮದೇವಿ ಸಮಿತಿಗೆ ವರ್ಗಾವಣೆ ಮಾಡುತ್ತೇವೆ. ತದನಂತರ ಆ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಸಮ್ಮುಖದಲ್ಲಿ ಒಪ್ಪಿಗೆ ಪಡೆದು, ಬಳಕೆ ಮಾಡಿಕೋಳ್ಳುವಂತೆ ಸಮಿತಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಮೇಟಿ, ಪಿಡಿಒ ಖಾಜಾ ಬೇಗಂ, ಗ್ರಾಮ ಲೆಕ್ಕಾಧಿಕಾರಿ ಚಂದಪ್ಪ ರಾಠೋಡ್, ಜಿ.ಪಂ.ಸದಸ್ಯರಾದ ಸಂಗಣ್ಣ ದೇಸಾಯಿ, ಗ್ರಾಮ ಪಂಚಾಯತ್ ಸದಸ್ಯರಾದ ಮರಿಯಪ್ಪ ಕಟ್ಟಿಮನಿ, ಅಮರಪ್ಪ, ಗ್ರಾಮಸ್ಥರಾದ ಬಸನಗೌಡ ಪಾಟೀಲ್, ಪಿಡ್ಡನಗೌಡ ಸಿದ್ದಾಪುರ, ಸೋಮಪ್ಪ ಗುಜ್ಜಲ್, ಯಮನಪ್ಪ ಕಟ್ಟಿಮನಿ, ಅಮರೇಶ ಪೂಜಾರಿ, ಹನುಮಂತ ದ್ಯಾಪುರಿ, ಸಣ್ಣಗದ್ದೆಪ್ಪ ಚಿಗರಿ,ಗದ್ದೆಪ್ಪ ಕನ್ನಾಳ, ಆನಂದ ಕುಂಬಾರ, ತಿಪ್ಪಣ್ಣ ಡೊಳ್ಳಿನ ಇನ್ನಿತರರಿದ್ದರು.