ಲಿಂಗಸುಗೂರು:- ಸಂವಿಧಾನ ಶಿಲ್ಪಿ ಡಾ॥ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131 ನೇ ಜಯಂತಿಯನ್ನು ಈಚನಾಳ ಗ್ರಾಮದಲ್ಲಿ ಸಾರ್ವಜನಿಕರು ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಮೇಟಿ, ರಾಮಣ್ಣ ಪೂಜಾರಿ ಕೆಸರಟ್ಟಿ, ದಲಿತ ಮುಖಂಡರಾದ ನಾಗಪ್ಪ ಸಾಲ್ಮನಿ , ರೈತ ಮುಖಂಡ ಸಹ ದೇವಪ್ಪ ಕರಡಿ, ಅಯ್ಯಪ್ಪ ಗಾಳಪೂಜಿ, ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲರೆಡ್ಡೆಪ್ಪ ದೊಡ್ಡಮನಿ, ಮಸ್ತಾನ್ ಅಲಿ, ಗದ್ಧೆಪ್ಪ ಬಡಿಗೇರ, ರಮೇಶ್ ಗಾಳಪೂಜಿ, ಪಿಡ್ಡಪ್ಪ, ನಾಗಪ್ಪ, ಮಲ್ಲಣ್ಣ ನೀರಲಕೇರಿ ಇನ್ನಿತರರಿದ್ದರು.