ICC World Cup 2023: ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಐತಿಹಾಸಿಕ ಜಯ..
Voice Of Janata News DesK
ICC World Cup 2023: ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 284 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ 215 ರನ್‌ಗಳಿಗೆ ಆಲೌಟ್ ಆಯಿತು. ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಈ ಅವಮಾನಕರ ಸೋಲು ಕಂಡಿತು.
ಏಕದಿನ ವಿಶ್ವಕಪ್ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಐತಿಹಾಸಿಕ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆಂಗ್ಲರನ್ನು 69 ರನ್ಗಳಿಂದ ಸೋಲಿಸಿ ಅಫ್ಘಾನ್ ಪಡೆ ಹೊಸ ಇತಿಹಾಸ ನಿರ್ಮಿಸಿದರು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡಕ್ಕೆ ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಭರ್ಜರಿ ಆರಂಭ ಒದಗಿಸಿದ್ದರು.
ENG vs AFG ಪಂದ್ಯದ ಸಂಕ್ಷಿಪ್ತ ಸ್ಕೋರ್
ಅಫಘಾನಿಸ್ತಾನ: 49.5 ಓವರ್‌ಗಳಲ್ಲಿ284 ರನ್‌ಗಳಿಗೆ ಆಲ್‌ಔಟ್ (ರೆಹಮಾನುಲ್ಲಾ ಗುರ್ಬಝ್ 80, ಇಬ್ರಾಹಿಮ್ ಝದ್ರಾನ್ 28, ಇಕ್ರಮ್ ಅಲಿಖಿಲ್ 58, ರಶೀದ್ ಖಾನ್ 23, ಮುಜೀಬ್ ಉರ್ ರೆಹಮಾನ್ 28; ಆದಿಲ್ ರಶೀದ್ 42ಕ್ಕೆ 3, ಮಾರ್ಕ್ ವುಡ್ 50ಕ್ಕೆ 2).
ಇಂಗ್ಲೆಂಡ್: 40.3 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲ್‌ಔಟ್ (ಡಾವಿಡ್ ಮಲಾನ್ 32, ಹ್ಯಾರಿ ಬ್ರೂಕ್ 66, ಆದಿಲ್ ರಶೀದ್ 20; ಮುಜೀಬ್ ಉರ್ ರೆಹಮಾನ್ 51ಕ್ಕೆ 3, ರಶೀದ್ ಖಾನ್ 37ಕ್ಕೆ 3, ಮೊಹಮ್ಮದ್ ನಬಿ 16ಕ್ಕೆ 2).
ಪಂದ್ಯಶ್ರೇಷ್ಠ: ಮುಜೀಬ್ ಉರ್ ರೆಹಮಾನ್