ICC WORLD CUP 2023 : ಆಸ್ಟ್ರೇಲಿಯಾಗೆ ಸುಲಭದ ತುತ್ತಾದ ನೆದರ್ಲೆಂಡ್ಸ್..!
Voice Of Janata News Desk : ಹೊಸದಿಲ್ಲಿ: ಇಲ್ಲಿ ಬುಧವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ಅಬ್ಬರಿಸಿ ತನ್ನ ಸಾಮರ್ಥ್ಯ ಮೆರೆದಿದ್ದು ನೆದರ್ಲ್ಯಾಂಡ್ಸ್ ವಿರುದ್ಧ ದಾಖಲೆಯ 309 ರನ್ ಗಳ ಜಯ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯ ಮ್ಯಾಕ್ಸ್ ವೆಲ್ ಸ್ಪೋಟಕ ದಾಖಲೆಯ ಶತಕ, ವಾರ್ನರ್ ಅವರ ಅಮೋಘ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 399 ರನ್ ಗಳನ್ನು ಕಲೆ ಹಾಕಿತು. 400 ರನ್ ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 21ಓವರ್ ಗಳಲ್ಲಿ 90 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
ಸಂಕ್ಷಿಪ್ತ ಸ್ಕೋರ್
ಆಸ್ಪ್ರೇಲಿಯಾ : 50 ಓವರ್‌ಗಳಲ್ಲಿ 399-8 (ಡೇವಿಡ್ ವಾರ್ನರ್ 104, ಗ್ಲೆನ್ ಮ್ಯಾಕ್ಸ್‌ವೆಲ್ 106, ಸ್ಟೀವನ್ ಸ್ಮಿತ್ 71, ಮಾರ್ನಸ್ ಲಾಬುಶೇನ್ 62; ವ್ಯಾನ್ ಬೀಕ್ 74ಕ್ಕೆ 4, ಬಾಸ್ ಡಿ ಲೀಡೆ 115ಕ್ಕೆ 2)
ನೆದರ್ಲೆಂಡ್ಸ್: 21 ಓವರ್‌ಗಳಲ್ಲಿ90-10 (ವಿಕ್ರಮ್‌ಜಿತ್ 25, ತೇಜ 14; ಆ್ಯಡಂ ಝಾಂಪ 8ಕ್ಕೆ 4, ಮಿಚೆಲ್ ಮಾರ್ಡ್ 19ಕ್ಕೆ 2)