ICC World Cup 2023 : ಆಸ್ಟ್ರೇಲಿಯಾ ವಿರುದ್ಧ ಡಚ್ಚರು ದೆಹಲಿಯಲ್ಲಿ ಮುಖಾಮುಖಿ ಇಂದು..!
Voice Of Janata Desk News : ಭಾರತದ ಅತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2023 ರ 24 ನೇ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಡಚ್ಚರು ನೆದರ್ಲೆಂಡ್ಸ್ ದೆಹಲಿಯಲ್ಲಿ ಮುಖಾಮುಖಿಯಾಗಲಿವೆ.
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ನ 24ನೇ (ICC World Cup 2023) ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಮಧ್ಯಾಹ್ನ 2 ಘಂಟೆಗೆ ಸೆಣಸಲಿದೆ. ಆದರೆ ಹೋಲಿಕೆಯಲ್ಲಿ ಎರಡೂ ತಂಡಗಳ ಸಾಮರ್ಥ್ಯ ಅಜಗಜಾಂತರ. ಆದರೆ ಹಾಲಿ ವಿಶ್ವಕಪ್ನಲ್ಲಿ ಈಗಾಗಲೇ ಕೆಲವು ಅಚ್ಚರಿಯ ಫಲಿತಾಂಶಗಳು ಕಂಡಿವೆ. ಅದರಂತೆ ಮತ್ತೇ ಮತ್ತೇ ಅಂತಹ ಅಚ್ಚರಿಗಳನ್ನು ಈ ಬಾರಿ ವಿಶ್ವಕಪ್ ಕಾಣಲು ಈ ಪಂದ್ಯ ಸಾಕ್ಷಿ, ಸಾಧ್ಯವಾಗಬಹುದು.
ತಂಡಗಳು ಹೀಗಿರಲಿವೆ
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹೇಜಲ್ವುಡ್.
ನೆದರ್ಲ್ಯಾಂಡ್ಸ್ : ವಿಕ್ರಮ್ಜಿತ್ ಸಿಂಗ್/ ವೆಸ್ಲಿ ಬಾರೆಸಿ, ಮ್ಯಾಕ್ಸ್ ಒ’ಡೌಡ್, ಕಾಲಿನ್ ಆಕರ್ಮ್ಯಾನ್, ಬಾಸ್ ಡಿ ಲೀಡ್, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್, ತೇಜಾ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಲೋಗನ್ ವ್ಯಾನ್ ಬೀಕ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ನೇರ ಪ್ರಸಾರ ವಿವರಗಳು
ದಿನಾಂಕ: ಬುಧವಾರ, ಅಕ್ಟೋಬರ್ 25
ಸಮಯ: ಮಧ್ಯಾಹ್ನ 2:00 (ಭಾರತೀಯ ಕಾಲಮಾನ)
ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್
ಲೈವ್ ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್