ಐಸಿಸಿ ವಿಶ್ವಕಪ್ 2023: ಇಂದು ಸಾಂಪ್ರದಾಯಿಕ ಎದುರಾಳಿ, ಪಾಕಿಸ್ತಾನ VS ಭಾರತ ಹೈ- ವೊಲ್ಟೇಜ್ ಪಂದ್ಯ..!
Voice Of Janata Desk News
ICC ODI World CUP 2023
ಐಸಿಸಿ ವಿಶ್ವಕಪ್ ೨೦೨೩:
ಸತತ ಜಯದೊಂದಿಗೆ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಆತಿಥೇಯ ಟೀಮ್ ಇಂಡಿಯಾ, ಇದೀಗ ತನ್ನ ಬಹುದೊಡ್ಡ ಸವಾಲಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಪೈಪೋಟಿ ನಡೆಸಲು ಸಜ್ಜಾಗಿದೆ. ಇಡೀ ಕ್ರಿಕೆಟ್ ಜಗತ್ತು ಬಹಳಾ ಕಾತುರದಿಂದ ಎದುರು ನೋಡುತ್ತಿರುವ ಹೈ-ವೋಲ್ಟೇಜ್ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14ರಂದು (ಶನಿವಾರ) ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಪ್ಲೇಯಿಂಗ್ ಇಲೆವೆನ್ ವಿವರ ಇಲ್ಲಿ ವಿವರಿಸಲಾಗಿದೆ.
ಎರಡು ತಂದ ಸಂಭಾವ್ಯ ಆಟಗಾರರು
ಭಾರತ: ರೋಹಿತ್ ಶರ್ಮಾ (ನಾಯಕ/ ಓಪನರ್) ಇಶಾನ್ ಕಿಶನ್ (ಓಪನರ್) ವಿರಾಟ್ ಕೊಹ್ಲಿ (ಬ್ಯಾಟರ್) ಶ್ರೇಯಸ್ ಅಯ್ಯರ್ (ಬ್ಯಾಟರ್) ಕೆಎಲ್ ರಾಹುಲ್ (ವಿಕೆಟ್ಕೀಪರ್/ ಬ್ಯಾಟರ್) ಹಾರ್ದಿಕ್ ಪಾಂಡ್ಯ (ಆಲ್ರೌಂಡರ್) ರವೀಂದ್ರ ಜಡೇಜಾ (ಆಲ್ರೌಂಡರ್) ಆರ್ ಅಶ್ವಿನ್ (ಆಲ್ರೌಂಡರ್) ಕುಲ್ದೀಪ್ ಯಾದವ್ (ಚೈನಾಮನ್ ಸ್ಪಿನ್ನರ್) ಜಸ್ಪ್ರೀತ್ ಬುಮ್ರಾ (ಬಲಗೈ ವೇಗಿ) ಮೊಹಮ್ಮದ್ ಶಮಿ (ಬಲಗೈ ವೇಗಿ)
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಝ್ವಾನ್ (ವಿಕೆಟ್ಕೀಪರ್), ಸೌದ್ ಶಕೀಲ್, ಇಫ್ತಿಖಾರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಝ್, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್.
ವಿಶ್ವಕಪ್ ಟೂರ್ನಿಯ 12ನೇ ಪಂದ್ಯದ ವಿವರ
ಭಾರತ vs ಪಾಕಿಸ್ತಾನ
ದಿನಾಂಕ: ಅಕ್ಟೋಬರ್ 14 (ಶನಿವಾರ)
ಸಮಯ: ಮಧ್ಯಾಹ್ನ 2 ಗಂಟೆಗೆ ಆರಂಭ