ಐಸಿಸಿ ವಿಶ್ವಕಪ್ 2023 :
ಬಲಿಷ್ಠ ಭಾರತದ ಬ್ಯಾಟಿಂಗ್ ಮುಂದೆ ಮಂಕಾದ ಬಾಂಗ್ಲಾ ಆಟಗಾರರು..!
Voice Of Janata News Desk
ಪುಣೆ : ಟಾಸ್ ಗದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲಾದೇಶ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 256 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತ ತಂಡಕ್ಕೆ 257 ರನ್ ಗುರಿ ನೀಡಿತ್ತು. ಗುರಿ ಹಿಂಬಾಲಿಸಿದ ಭಾರತೀಯ ತಂಡ ವಿರಾಟ್ ಕೊಯ್ಲಿ ಅಬ್ಬರ್ ಬ್ಯಾಟಿಂಗ್ ನಿಂದ ಗೆಲುವು ಸಾಧಿಸಿತು.
ಗುರುವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ನೀಡಿದ್ದ 257 ರನ್‌ಗಳ ಗುರಿ ಹಿಂಬಾಲಿಸಿದ ಭಾರತ ತಂಡ, 41.3 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ಆ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ವಿರಾಟ್ ಕೊಹ್ಲಿ (103* ರನ್) ಭರ್ಜರಿ ಶತಕದ ಬಲದಿಂದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯ 17ನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಬಾಂಗ್ಲಾದೇಶ ಎದುರು ಗೆಲುವು ಪಡೆಯಿತು. ಅಷ್ಟೇ ಅಲ್ಲದೆ ಸತತ ನಾಲ್ಕನೇ ಗೆಲುವಿನ ಮೂಲಕ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಮರಳಿತು.
ICC ODI World CUP 2023 : INDIA VS BANGLADESH
ಸ್ಕೋರ್ ವಿವರ
ಬಾಂಗ್ಲಾದೇಶ: 50 ಓವರ್‌ಗಳಿಗೆ 256-8 (ಲಿಟನ್ ದಾಸ್ 66, ತಂಝಿದ್ ಹಸನ್ 51, ಮಹಮ್ಮದ್‌ಉಲ್ಲಾ 48, ಮುಷ್ಫಿಕರ್ ರಹೀಮ್ 38; ಜಸ್‌ಪ್ರೀತ್ ಬುಮ್ರಾ 41ಕ್ಕೆ 2, ಮೊಹಮ್ಮದ್ ಸಿರಾಜ್ 60ಕ್ಕೆ 2, ರವೀಂದ್ರ ಜಡೇಜಾ 38ಕ್ಕೆ 2)
ಭಾರತ :41.3 ಓವರ್‌ಗಳಿಗೆ 263-3 (ವಿರಾಟ್ ಕೊಹ್ಲಿ 103*, ಶುಭಮನ್ ಗಿಲ್ 53, ರೋಹಿತ್ ಶರ್ಮಾ 48*; ಮೆಹಿದಿ ಹಸನ್ ಮಿರಾಜ್ 47ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್ ಕೊಹ್ಲಿ