ರೋಹಿತ್ ಅಬ್ಬರಕ್ಕೆ ಮೊಣಕಾಲೂರಿದ ಅಫ್ಘಾನ್..!
ರೋಹಿತ್ ಅಬ್ಬರದ ಆಟಕ್ಕೆ ಭಾರತಕ್ಕೆ ಗೆಲವು..ಯಾರ ವಿರುದ್ಧ ಗೊತ್ತಾ..!
ICC ODI World CUP 2023: ಐಸಿಸಿ ವಿಶ್ವಕಪ್ 2023 : Voice of Janata News Desk: ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನವು, ಭಾರತ ಗೆಲ್ಲಲು 273 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿತು.
ಇದಕ್ಕೆ ಪ್ರತಿಸ್ಪರ್ಧಿಯಾಗಿ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ (39ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿ ಹಾಗೂ ನಾಯಕ ರೋಹಿತ್ ಶರ್ಮಾ (131 ರನ್) ಅವರ ಶತಕದ ಬಲದಿಂದ ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ದ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿತು.
ಎರಡು ತಂಡದ ಸ್ಕೋರ್ ವಿವಿರ್
ಅಫಘಾನಿಸ್ತಾನ: 50 ಓವರ್‌ಗಳಿಗೆ 272-8 ( ಹಷ್ಮತುಲ್ಹಾ ಶಾಹಿಡಿ 80, ಅಝಮತುಲ್ಹಾ ಒಮರ್ಝಾಯ್ 62; ಜಸ್‌ಪ್ರೀತ್ ಬುಮ್ರಾ 39ಕ್ಕೆ 4, ಹಾರ್ದಿಕ್ ಪಾಂಡ್ಯ 43 ಕ್ಕೆ 2)
ಭಾರತ: 35 ಓವರ್‌ಗಳಿಗೆ 273-2 (ರೋಹಿತ್ ಶರ್ಮಾ 131, ವಿರಾಟ್ ಕೊಹ್ಲಿ 55*, ಇಶಾನ್ ಕಿಶನ್ 47, ಶ್ರೇಯಸ್ ಅಯ್ಯರ್ 25*; ರಶೀದ್ ಖಾನ್ 57ಕ್ಕೆ 2)