ICC ODI Men’s World Cup 2023: ಸೋಲಿನ ಸರಪಳಿಯಿಂದ ಹೊರಗೆ ಬಂದ್ ಪಾಕಿಸ್ತಾನ, 7 ವಿಕೆಟ್ ಜಯ
Voice of Janata Desk news : ICC ODI Men’s World Cup 2023: Pakistan vs Bangladesh
ಕೋಲ್ಕತಾ: ಮಂಗಳವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿದೆ.
ಫಖರ್ ಝಮಾನ್ ಹಾಗೂ ಅಬ್ದುಲ್ಲಾ ಶಫೀಕ್ ಆಕರ್ಷಕ ಅರ್ಧಶತಕ ನೆರವಿಂದ ಪಾಕ್ ತಂಡ ಏಕಪಕ್ಷೀಯವಾಗಿ ಬಾಂಗ್ಲಾ ವಿರುದ್ಧ ಪ್ರಾಬಲ್ಯ ಮೆರೆಯಿತು. ಪರಿಣಾಮ 33.3 ಓವರ್ ನಲ್ಲಿಯೇ 3 ವಿಕೆಟ್ ಕಳೆದುಕೊಂಡು ಪಾಕ್ ಗುರಿ ತಲುಪಿತು.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ ತನ್ನ ಸೇಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡರೂ ಅದು ಇತರೆ ತಂಡಗಳ ಫಲಿತಾಂಶ ಆದರಿಸಿಕೊಂಡಿದೆ. ಆದರೆ ಈ ಹೀನಾಯ ಸೋಲಿನ ಬಳಿಕ ಬಾಂಗ್ಲಾದೇಶ ತಾನಾಡಿದ 7 ಪಂದ್ಯಗಳಲ್ಲಿ 6 ಸೋತು ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.
ಸಂಕ್ಷಿಪ್ತ ಸ್ಕೋರು..
ಬಾಂಗ್ಲಾದೇಶ: 45.1 ಓವರ್‌ಗಳಲ್ಲಿ 204 (ಲಿಟನ್ ದಾಸ್ 45, ಮೆಹಮುದುಲ್ಲಾ 56, ಶಕೀಬ್ ಅಲ್ ಹಸನ್ 43, ಮೆಹದಿ ಹಸನ್ ಮಿರಾಜ್ 25, ಶಹೀನ್ ಅಫ್ರಿದಿ 23ಕ್ಕೆ3, ಮೊಹಮ್ಮದ್ ವಾಸೀಂ ಜೂನಿಯರ್ 31ಕ್ಕೆ3, ಹ್ಯಾರಿಸ್ ರವೂಫ್ 36ಕ್ಕೆ2)
ಪಾಕಿಸ್ತಾನ: 32.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 205 (ಅಬ್ದುಲ್ಲಾ ಶಫೀಕ್ 68, ಫಕಾರ್ ಜಮಾನ್ 81, ಮೊಹಮ್ಮದ್ ರಿಜ್ವಾನ್ ಔಟಾಗದೆ 26, ಇಫ್ರಿಕಾರ್ ಅಹಮದ್ ಔಟಾಗದೆ 17, ಮೆಹದಿ ಹಸನ್ ಮಿರಾಜ್ 60ಕ್ಕೆ3) ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 7 ವಿಕೆಟ್‌ಗಳ ಜಯ