ICC ODI Men’s WORLD CUP 2023 : ಆಂಗ್ಲರ ಸದ್ದುಡಗಿಸಿದ ಭಾರತ ಬೌಲರಗಳು..!
Voice of Janata News Desk : Cricket World Cup 2023 | India vs England : ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರೆನಿಸಿರುವ ಟೀಮ್ ಇಂಡಿಯಾ ಸತತ 6 ಜಯದೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದೆ. ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ಎದುರು ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಲೋ ಸ್ಕೋರಿಂಗ್ ಪಂದ್ಯದಲ್ಲಿ ಒತ್ತಡ ನಿಭಾಯಿಸಿ ಅದ್ಭುತ ಆಟವಾಡಿದ ಭಾರತ 100 ರನ್‌ಗಳ ಜಯ ದಾಖಲಿಸಿತು. ಸೋತು ಸುಣ್ಣವಾದ ಇಂಗ್ಲೆಂಡ್ ಅಂಕಪಟ್ಟಿಯ ಪಾತಾಳದಲ್ಲಿ ಮತ್ತಷ್ಟು ಹುದುಗಿಹೋಗಿದೆ.
ಅಟಲ್ ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ವಿಶ್ಚಕಪ್ 2023 ಟೂರ್ನಿಯಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತ್ತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭಿಕ ಆಘಾತಕ್ಕೊಳಗಾಯಿತು. ಶುಭಮನ್ ಗಿಲ್ (9), ವಿರಾಟ್ ಕೊಹ್ಲಿ (0) ಮತ್ತು ಶ್ರೇಯಸ್ ಅಯ್ಯರ್ (4) ಬಹುಬೇಗ ಪೆವಿಲಿಯನ್ ಸೇರಿದರು. ಆದರೆ, ಇನ್‌ಫಾರ್ಮ್ ಓಪನರ್ ಹಾಗೂ ನಾಯಕ ರೋಹಿತ್ ಶರ್ಮಾ (87) ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಚೇತರಿಕೆ ತಂದರು. ಆದರೆ, ಅವರಿಗೆ ಉತ್ತಮ ಬೆಂಬಲ ಸಿಗದೇ ಹೋಯಿತು. ಸಿಕ್ಕ ಆರಂಭವನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಪರಿಣಾಮ 50 ಓವರ್‌ಗಳಲ್ಲಿ ಭಾರತ ತಂಡ 9 ವಿಕೆಟ್ ಕಳೆದುಕೊಂಡು 229 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು.
ಇನ್ನೂ ಗುರಿ ಬೆನ್ನಟ್ಟಿದ ಇಂಗ್ಲೆಂಡ ತಂಡ ಭಾರತದ ಬೌಲರ್ ಗಳ ಎದುರು ಮಂಡಿಯೂರಿತು. 230 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 129 ಕ್ಕೆ ಸರ್ವಪತನ ಕಂಡಿತು. ಇದಕ್ಕೂ ಮುನ್ನ, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229ರನ್ ಗಳಿಸಿದ್ದು, ಇಂಗ್ಲೆಂಡ್ ಗೆಲ್ಲಲು 230ರನ್ ಗಳ ಸಾಧಾರಣ ಗುರಿ ನೀಡಿತ್ತು.