IND vs NZ
Voice Of Janata DesK News : ICC ODI Men’s CricKet WORLD CUP 2023: ಐಸಿಸಿ ವಿಶ್ವಕಪ್ : ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 70 ರನ್‌ಗಳ ಗೆಲುವು ಸಾಧಿಸಿದ್ದು, 4ನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿದೆ. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 7 ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದರು. ಭಾರತ ನಿಗದಿತ 50 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಕಿವೀಸ್ 48.5 ಓವರ್‌ಗಳಲ್ಲಿ 327 ರನ್ ಗಳಿಸಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡ, 70 ರನ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯ ಫೈನಲ್‌ಗೆ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಲಗ್ಗೆ ಇಟ್ಟಿದೆ. 2015 ಹಾಗೂ 2019ರ ವಿಶ್ವಕಪ್ ಟೂರ್ನಿಗಳ ಸೆಮಿಫೈನಲ್ ಹಂತದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ, ಪ್ರಸಕ್ತ ಆವೃತ್ತಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಭಾರತ ನೀಡಿದ್ದ 398 ರನ್ ಗುರಿ ಹಿಂಬಾಲಿಸಿದ ಕಿವೀಸ್ 327 ರನ್‌ಗಳಿಗೆ ಆಲ್‌ಔಟ್ ಆಗಿ ಮತ್ತೊಮ್ಮೆ ಚೊಚ್ಚಲ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು.
ಸ್ಕೋರ್ ವಿವರ
ಭಾರತ: 50 ಓವರ್‌ಗಳಿಗೆ 397-4 (ವಿರಾಟ್ ಕೊಹ್ಲಿ 117, ಶ್ರೇಯಸ್ ಅಯ್ಯರ್ 105, ಶುಭಮನ್ ಗಿಲ್ 80*( ಟಿಮ್ ಸೌಥಿ 100ಕ್ಕೆ 3)
ನ್ಯೂಜಿಲೆಂಡ್: 48.5 ಓವರ್‌ಗಳಿಗೆ 327-10 (ಡ್ಯಾರಿಲ್ ಮಿಚೆಲ್ 134, ಕೇನ್ ವಿಲಿಯಮ್ಸನ್ 69, ಗ್ಲೆನ್ ಫಿಲಿಪ್ಸ್ 41; ಮೊಹಮ್ಮದ್ ಶಮಿ 57ಕ್ಕೆ 7, ಕುಲ್ದೀಪ್ ಯಾದವ್ 56ಕ್ಕೆ 1)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಮೊಹಮ್ಮದ್ ಶಮಿ