ICC ODI Men’s CRICKET WORLD CUP 2023: AUS Vs Africa
Voice Of JANATA DesK News : 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕಾಂಗರೂ ತಂಡ ದಕ್ಷಿಣ ಆಫ್ರಿಕಾವನ್ನು 3 ವಿಕೆಟ್ ಗಳಿಂದ ಸೋಲಿಸಿತು. ದಕ್ಷಿಣ ಆಫ್ರಿಕಾ ಮತ್ತೊಮ್ಮೆ ವಿಶ್ವಕಪ್ ಸೆಮಿಫೈನಲ್‌ನಂತಹ ದೊಡ್ಡ ವೇದಿಕೆಯ ಮೇಲೆ ಬಂದು ‘ಚೋಕರ್ಸ್’ ಎಂಬ ಹಣೆಪಟ್ಟಿಯಂತೆ ಆಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಇಲ್ಲಿ ವೈಫಲ್ಯ ಅನುಭವಿಸಿದರು. ಟೂರ್ನಿಯುದ್ದಕ್ಕೂ ರನ್‌ಗಳ ಹೊಳೆ ಹರಿಸಿದ್ದವರೆಲ್ಲರೂ ಪ್ಯಾಟ್ ಕಮಿನ್ಸ್ ಮತ್ತು ಜೋಷ್ ಹ್ಯಾಜಲ್‌ವುಡ್ ಅವರ ವೇಗದ ದಾಳಿಗೆ ಶರಣಾದರು. 12 ಓವರ್‌ಗಳಲ್ಲಿ 24 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆಂತಕ ಎದುರಿಸಿತು.
ಆದರೆ ಡೇವಿಡ್ ಮಿಲ್ಲರ್ ಶತಕದ ನೆರವಿನಿಂದ ತಂಡವು 49.4 ಓವರ್‌ಗಳಲ್ಲಿ 212 ರನ್‌ಗಳ ಮೊತ್ತ ಗಳಿಸಿತು. ಈ ಮೊತ್ತವನ್ನು ರಕ್ಷಿಸಿಕೊಂಡು ತಮ್ಮ ತಂಡವನ್ನು ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ತೆಗೆದುಕೊಂಡು ಹೋಗಲು ದಕ್ಷಿಣ ಆಫ್ರಿಕಾ ಬೌಲರ್‌ಗಳು ಮಾಡಿದ ಪ್ರಯತ್ನಕ್ಕೆ ಗೆಲುವಿನ ಗೌರವ ದೊರೆಯಲಿಲ್ಲ. ಇದರಿಂದಾಗಿ ಎಚ್ಚರಿಕೆಯಿಂದ ಆಡಿದ ಆಸ್ಟ್ರೇಲಿಯಾ ತಂಡವು 47.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 215 ರನ್ ಗಳಿಸಿತು.
ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಮೊದಲ ವಿಕೆಟ್‌ಗೆ 60 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಈ ರನ್‌ಗಳು ಆರು ಓವರ್‌ಗಳಲ್ಲಿ ಬಂದವು.
ಆದರೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ಗಳಾದ ಕೇಶವ ಮಹಾರಾಜ್, ತಬ್ರೇಜ್ ಶಂಸಿ, ಏಡನ್ ಮರ್ಕರಂ ಮತ್ತು ವೇಗಿ ಜೆರಾಲ್ಡ್ ಕೋಜಿ ಅವರ ಶಿಸ್ತಿನ ದಾಳಿಯಿಂದಾಗಿ ಆಸ್ಟ್ರೇಲಿಯಾ ವಿಕೆಟ್‌ಗಳು ಪತನವಾಗತೊಡಗಿದವು. ಆಗ ಬ್ಯಾಟರ್‌ಗಳು ರನ್ ಗಳಿಕೆಯ ವೇಗಕ್ಕೆ ಕಡಿವಾಣ ಹಾಕಿದರು.
ಇದರಿಂದಾಗಿ 23.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 137 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟರ್‌ಗಳು ನಂತರದ 78 ರನ್ ಸೇರಿಸಲು ಅಷ್ಟೇ ಓವರ್‌ಗಳನ್ನು ಆಡಬೇಕಾಯಿತು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ: 49.4 ಓವರ್‌ಗಳಿಗೆ 212-10 (ಡೇವಿಡ್ ಮಿಲ್ಲರ್ 101, ಹೆನ್ರಿಚ್ ಕ್ಲಾಸೆನ್ 47; ಮಿಚೆಲ್ ಸ್ಟಾರ್ಕ್ 34ಕ್ಕೆ 3, ಪ್ಯಾಟ್ ಕಮಿನ್ಸ್ 51ಕ್ಕೆ 3, ಟ್ರಾವಿಸ್ ಹೆಡ್ 21ಕ್ಕೆ 2)
ಆಸ್ಟ್ರೇಲಿಯಾ: 47.2 ಓವರ್‌ಗಳಿಗೆ 215-7 (ಟ್ರಾವಿಸ್ ಹೆಡ್ 62, ಸ್ಟೀವನ್ ಸ್ಮಿತ್ 30, ಡೇವಿಡ್ ವಾರ್ನರ್ 29; ತಬ್ರೈಝ್ ಶಾಮ್ಸಿ 42ಕ್ಕೆ 2, ಗೆರಾಲ್ಡ್ ಕೊಯೆಟ್ಜಿ 47ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಟ್ರಾವಿಸ್ ಹೆಡ್