ICC Cricket ODI Men’s World CUP 2023 : INDIA VS SOUTH Africa
Voice Of Janata DesK News
ಕೋಲ್ಕತ್ತ: ಈಡನ್ ಗಾರ್ಡನ್‌ನಲ್ಲಿ ಭಾನುವಾರ ಕಿಕ್ಕಿರಿದು ಸೇರಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ತಮ್ಮ ಜನ್ಮದಿನದ ‘ಸಿಹಿ’ಯನ್ನು ಹಂಚಿದರು.
ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್ನಲ್ಲಿ ಭಾರತದ ಬೌಲಿಂಗ್ ಮಿಂಚುತ್ತಿದ್ದು, ಶ್ರೀಲಂಕಾ ನಂತರ ದಕ್ಷಿಣ ಆಫ್ರಿಕಾವನ್ನು 100ರ ಒಳಗೆ ಭಾರತ ಕಟ್ಟಿಹಾಕಿ ಬೃಹತ್ ಜಯ ದಾಖಲಿಸಿದೆ. 327 ರನ್ಗಳ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 27.1 ಓವರ್ಗೆ 83 ರನ್ ಗಳಿಸಿ ಆಲ್ಔಟ್ ಆಯಿತು. ಇದರಿಂದ ಭಾರತ 243 ರನ್ಗಳ ಬೃಹತ್ ಜಯ ದಾಖಲಿಸಿದೆ.
ಭಾರತ– 326/5 (50)
ಸೌತ್ ಆಫ್ರಿಕಾ– 83 (27.1)
ಸೌತ್ ಆಫ್ರಿಕಾ ವಿರುದ್ಧ 243 ರನ್ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ.