ಮತದಾರರ ಸಮಸ್ಯೆಗಳಿಗೆ ಸ್ಪಂದಿಸಲು ಬದ್ಧನಾಗಿದ್ದೇನೆ : ವಿಪ ಶಾಸಕ ಪಾಟೀಲ
ವಿಜಯಪುರ, ನ. 15: ಸ್ಛಳೀಯ ಸಂಸ್ಛೆಗಳ ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಯಿದ್ದರೂ ಗಮನಕ್ಕೆ ತಂದರೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಗುರುವಾರ ಆಡಳಿತಾತ್ಮಕ ಅವಹಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಮತದಾರರ ಸಮಸ್ಯೆಗಳಿಗೆ ಸ್ಪಂದಿಸಲು ಬದ್ಧನಾಗಿದ್ದೇನೆ. ಈಗಾಗಲೇ ಗ್ರಾ. ಪಂ. ಸದಸ್ಯರಿಗೆ ಕೇರಳ ಮಾದರಿಯಲ್ಲಿ ಸರಕಾರದಿಂದ ಸೌಲಭ್ಯ ದೊರಕಿಸಿ ಕೊಡಲು ಹೋರಾಟ ನಡೆಸಿದ್ದೇನೆ. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಅಗತ್ಯವಾಗಿರುವ ಕ್ರಮಗಳ ಕುರಿತು ಸದಸ್ಯರು ಗಮನಕ್ಕೆ ತಂದರೆ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಪರಿಹಾರ ಒದಗಿಸಲು ಶ್ರಮಿಸುತ್ತೇನೆ. ಯಾವುದೇ ಸಮಸ್ಯೆಗಳಿದ್ದರೂ ಲಿಖಿತ ರೂಪದಲ್ಲಿ ವಾಟ್ಸಾಪ್ ಮೂಲಕ ಇಲ್ಲವೆ ಶಾಸಕರ ಕಚೇರಿಯ ಸಿಬ್ಬಂದಿಗೆ ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಸಮಸ್ಯೆಯ ಪರಿಹಾರದ ಸ್ಥಿತಿಗತಿ ಕುರಿತು ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಕ್ಷ ಸಂಘಟನೆಯ ಕುರಿತು ಅವರು ಮಾತನಾಡಿದರು.
ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ, ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಆಲಮೇಲ ಪ. ಪಂ. ಆಲಮೇಲ ಅಧ್ಯಕ್ಷ ಸಾದಿಕ ಸುಂಬಡ, ಸಿಂದಗಿ ತಾ. ಪಂ. ಇಓ ರಾಮು ಅಗ್ನಿ, ಆಲಮೇಲ ತಾ. ಪಂ. ಇಓ ಫರಿದಾ ಪಠಾಣ, ಪ. ಪಂ. ಇಓ ಸುರೇಶ ನಾಯಕ, ನಾನಾ ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ, ಮುಖಂಡರಾದ ಎಸ್. ಎಂ. ಪಾಟೀಲ ಗಣಿಹಾರ, ಚನ್ನು ವಾರದ, ಮಲ್ಲಣ್ಣ ಸಾಲಿ, ಸಾದಿಕ ಸುಂಬಡ, ಪರಶುರಾಮ ಕಾಂಬಳೆ, ಮುಸ್ತಾಕ ಮುಲ್ಲಾ, ಚಂದ್ರಶೇಖರ ದೇವರಡ್ಡಿ, ಶಿವು ಕೋಟಾರಗಸ್ತಿ, ಸುರೇಶ ಪೂಜಾರಿ, ಸುರೇಶ ಮಳಲಿ, ಖಾನಾಪುರ, ರಫೀಕ್ ಗುಬ್ಬೆವಾಡ, ಜಯಶ್ರೀ ಹದನೂರ, ಶಿವಣ್ಣ ಹತ್ತಿ, ಪ್ರಶಾಂತ ಬಿರಾದಾರ, ರೇಣುಕಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಮುಂತಾದವರು ಉಪಸ್ಥಿತರಿದ್ದರು.
1. ಶಾಸಕ ಸುನೀಲಗೌಡ ಪಾಟೀಲ ಸಿಂದಗಿ ಸಭೆ: ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಸಿಂದಗಿಯಲ್ಲಿ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ, ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಆಲಮೇಲ ಪ. ಪಂ. ಆಲಮೇಲ ಅಧ್ಯಕ್ಷ ಸಾದಿಕ ಸುಂಬಡ, ಸಿಂದಗಿ ತಾ. ಪಂ. ಇಓ ರಾಮು ಅಗ್ನಿ, ಆಲಮೇಲ ತಾ. ಪಂ. ಇಓ ಫರಿದಾ ಪಠಾಣ, ಪ. ಪಂ. ಇಓ ಸುರೇಶ ನಾಯಕ, ನಾನಾ ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
2. ಶಾಸಕ ಸುನೀಲಗೌಡ ಪಾಟೀಲ ಸಿಂದಗಿ ಸಭೆ: ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಸಿಂದಗಿಯಲ್ಲಿ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ, ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಆಲಮೇಲ ಪ. ಪಂ. ಆಲಮೇಲ ಅಧ್ಯಕ್ಷ ಸಾದಿಕ ಸುಂಬಡ, ಸಿಂದಗಿ ತಾ. ಪಂ. ಇಓ ರಾಮು ಅಗ್ನಿ, ಆಲಮೇಲ ತಾ. ಪಂ. ಇಓ ಫರಿದಾ ಪಠಾಣ, ಪ. ಪಂ. ಇಓ ಸುರೇಶ ನಾಯಕ, ನಾನಾ ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.