ಇಂಡಿ : ಹೂಗಾರ ಮಾಳಿ ಮಾಲಗಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಘೋಷಿಸಿದ ಪ್ರಯುಕ್ತ ಹೂಗಾರ ಸಮಾಜ ಬಾಂಧವರು ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ರಂದು ಪಟ್ಟಣದ ವೃತ್ತದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸೂಗೌಡ ಬಿರಾದಾರ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ ಸರ್ವ ಸಮಾಜದ ಹಿತ ಕಾಯುತ್ತಿದೆ ಬಡ ವರ್ಗ ಹಾಗೂ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಹೂಗಾರ ಸಮಾಜ ಮಾಳಿ ಸಮಾಜ ಸೇರಿದಂತೆ ಗಾಣಿಗ ಸಮಾಜ ಗಳಿಗೆ ಪ್ರತ್ಯೇಕ ನಿಗಮ ಮಂಡಳಿ ಘೋಷಣೆ ಮಾಡಿ ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಗ್ರಾ.ಪ ಸದಸ್ಯ ,ಸಮುದಾಯದ ಮುಖಂಡ ಮಹೇಶ ಹೂಗಾರ ಮಾತಾನಾಡಿದ ಅವರು, ಪ್ರತ್ಯಕ ನಿಗಮ ಮಂಡಳಿ ಹೂಗಾರ ಸಮುದಾಯದ ಬಹುದಿನದ ಬೇಡಿಕೆಯಾಗಿತ್ತು. ಇಂದು ಹೂಗಾರ ಸಮುದಾಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನಿಗಮವನ್ನು ಸ್ಥಾಪಿಸಿದ್ದು ಸಂತಸ ತಂದಿದ್ದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಸರಕಾರಕ್ಕೆ ಕೃತಜ್ಞತೆ ತಿಳಿಸುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಳು ಮುಳಜಿ, ಸೂಮು ಹೂಗಾರ, ವಿರೂಪಾಕ್ಷೀ ಹೂಗಾರ, ಸಂತು ಹೂಗಾರ, ಗುರುಬಾಳಪಾಪ್ಪ ಹೂಗಾರ, ಶಾಂತು ಹೂಗಾರ, ಮಂಜು ಹೂಗಾರ, ಶ್ರೀ ಶೃಲ ಹೂಗಾರ, ಮಹಾಂತೇಶ ಹೂಗಾರ, ಶಿವೂ ಹೂಗಾರ, ಜೆಟು ಹೂಗಾರ, ಸಂತೋಷ ಹೂಗಾರ, ಅಮಿತ ಹೂಗಾರ, ಸಿದ್ದು ಹೂಗಾರ, ರಾಘವೇಂದ್ರ ಹೂಗಾರ, ರವಿ ಹೂಗಾರ ಹಾಗೂ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು