ಎಚ್‌ಪಿಎಲ್ ಸೀಸನ್ 2 ಪ್ರಶಸ್ತಿ ಮುಡಿಗೇರಿಸಿದ ಸ್ಟುಡಿಯೋ ವಾರಿಯರ್ಸ್
ಹನೂರು: ಕ್ರೀಡೆಯಲ್ಲಿ ತೊಡಗಿ ಕೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢತೆಯನ್ನು ಕಾಪಾಡಿಕೊಳ್ಳಬಹುದು ಎಂದು ಎಇ ರಂಗಸ್ವಾಮಿ ತಿಳಿಸಿದರು.
ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಹೆಚ್ ಪಿ ಎಲ್ ಸೀಸನ್ 2 ಅನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು.
ಹೆಚ್ ಪಿ ಎಲ್ ಸೀಸನ್ 2ರ ವಿನ್ನರ್ ಆಗಿ ಸ್ಟುಡಿಯೋ ಶಂಕರ್ ಮಾಲಿಕತ್ವದ ಸ್ಟುಡಿಯೋ ವಾರಿಯರ್ಸ್ ತಂಡವು ಚೇತನ್ ಕುಮಾರ್ ನಾಯಕತ್ವದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಶಿವಲಂಕರಿ ಮಾಲಿಕತ್ವದ ಹನೂರು ಅಟಕರ್ಸ್ ತಂಡವು ಮಹೇಶ್ ನಾಯಕತ್ವದಲ್ಲಿ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿತು. ಈ ಟೂರ್ನಿಯಾ ಅತ್ಯುತ್ತಮ ಬ್ಯಾಟ್ಸ್ಮನ್ ರಿಜ್ವಾನ್, ಅತ್ಯುತ್ತಮ ಬೋಲರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹನೂರು ಅಟಕರ್ಸ್ ತಂಡದ ಮಹೇಶ್ , ಹಾಗೂ ಫೈನಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಸ್ಟುಡಿಯೋ ವಾರಿಯರ್ಸ್ ತಂಡದ ಪರಂ ರವರು ತೆಗೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್ ಕುಮಾರ್, ಸೋಮಶೇಖರ್, ಗುತ್ತಿಗೆದಾರ ರವಿ, ಶಶಿಕುಮಾರ್, ಶಂಕರ್, ನಾಗ ರೆಡ್ಡಿ, ಮೇಘರಾಜ್, ಶ್ರೀನಿವಾಸ್, ಶಿವಲಂಕರಿ, ಮಹೇಶ್, ಆಯೋಜಕ ಸಂಜು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.