ತಳವಾರ ಸಮುದಾಯಕ್ಕೆ ಕಾಂಗ್ರೆಸ್ ಅವಹೇಳನ ಎಷ್ಟು ಸರಿ..! ಅಧ್ಯಕ್ಷ ವಿಜಯ ಸಾಲಾವಾಡಗಿ
ದೇವರ ಹಿಪ್ಪರಗಿ : ತಳವಾರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಪ.ಪಂ ವಿಭಾಗದ ಜಿಲ್ಲಾಧ್ಯಕ್ಷ ಹುದ್ದೆ ನೀಡಿ ಏಕಾಏಕಿ ತೆಗಿದಿದ್ದು, ಅತ್ಯಂತ ನೋವಾಗಿದ್ದು, ಸಮುದಾಯಕ್ಕೆ ಅವಹೇಳನ ಮಾಡಿದ್ದಂತಾಗಿದೆ. ಇದನ್ನು ತೀವ್ರವಾಗಿ ತಳವಾರ ಸಮಾಜ ಖಂಡಿಸುತ್ತೆದೆ ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ದೇವರ ಹಿಪ್ಪರಗಿ ತಾಲ್ಲೂಕು ಅಧ್ಯಕ್ಷ ವಿಜಯ ಸಾಲಾವಾಡಗಿ ಆಕ್ರೋಷ ವ್ಯಕ್ತಪಡಿಸಿ ಮಾತನಾಡಿದರು.
ಸೋಮವಾರ ಪಟ್ಟಣದ ಖಾಸಗಿ ಹೊಟೆಲ್ ಯೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿಜಯಪುರ ಜಿಲ್ಲೆಯ ತಳವಾರ ಸಮಾಜದ ಮುಖಂಡ ಸಣ್ಣಪ್ಪ ತಳವಾರ ಅವರನ್ನು ಕಾಂಗ್ರೆಸ್ ಪಕ್ಷದ ಪ.ಪಂ ಜಿಲ್ಲಾಧ್ಯಕ್ಷ ಹುದ್ದೆ ನೀಡಿ, ವಾರದಲ್ಲಿಯೇ ಏಕಾಏಕಿ ಹುದ್ದೆಯಿಂದ ತೆಗಿದಿದ್ದು, ಇದು ಎಂತಹ ಅನ್ಯಾಯ. ಅವರು ಕಾಂಗ್ರೇಸ್ ಪಕ್ಷದಲ್ಲಿ ಕಟ್ಟ ಕಾರ್ಯಕರ್ತರಾಗಿ ಹಗಲು-ಇರಳು ಶ್ರಮಿಸಿದ್ದಾರೆ. ಅಂತಹ ನಂಬಿಕಸ್ಥ ಪ್ರಾಮಾಣಿಕ ಕಾರ್ಯಕರ್ತರಿಗೆ ಹಾಗೂ ತಳವಾರ ಸಮಾಜಕ್ಕೆ ದೊಡ್ಡ ಅಪಮಾನ ಮತ್ತು ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ನಮ್ಮ ಸಮಾಜದ ದೊಡ್ಡ ಪ್ರಮಾಣದಲ್ಲಿದ್ದರೂ ಇಂತಹ ಕೆಟ್ಟ ಪರಿಸ್ಥಿತಿ ಅನುಭವಿಸುವ ಗಂಭೀರ ಪರಿಸ್ಥಿತಿ ಬಂದೂದೊದಗಿದೆ. ಇದನ್ನು ತಳವಾರ ಸಮಾಜ ಅರ್ಥ ಮಾಡಿಕೊಳ್ಳಬೇಕು. ಇನ್ನೂ ಇಡೀ ರಾಜ್ಯದಲ್ಲಿರುವ ೧೦ ಲಕ್ಷಕ್ಕಿಂತ ಹೆಚ್ಚಿರುವ ಈ ತಳವಾರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಂದು ಗೌರವದ ಸ್ಥಾನ ಸಿಗದೆಯಿರುವುದು ವಿಷಾಧನೀಯ, ಅದರಲ್ಲೂ ಬೆಳಗಾವಿ, ಬಾಗಲಕೋಟ, ದಾರವಾಡ, ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಈ ಸಮುದಾಯದ ಓರ್ವರಿಗೂ ಸೂಕ್ತವಾದ ಶ್ರೇಣಿಯ ಹುದ್ದೆ ನೀಡದೆಯಿರುವುದು ಪಕ್ಷದ ಹಿರಿಯ ಮುಖಂಡರ ಮೇಲೆ ತಳವಾರ ಸಮುದಾಯವು ತೀವ್ರವಾಗಿ ಖಂಡಿಸುತ್ತೆವೆ. ಈ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಣ್ಣಪ್ಪ ತಳವಾರ ಅವರನ್ನು ಮತ್ತೆ ಜಿಲ್ಲಾಧ್ಯಕ್ಷ ಹುದ್ದೆ ನೀಡಿ ಮತ್ತು ಈ ತಳವಾರ ಸಮುದಾಯದ ನಾಯಕರಿಗೆ ಪಕ್ಷದಲ್ಲಿ ರಾಜ್ಯ ಮಟ್ಟದ ಹುದ್ದೆ ನೀಡಬೇಕೆಂದು ಆಗ್ರಹಿಸಿದರು.
ಇನ್ನೂ ತಳವಾರ ಸಮಾಜ ಮುಖ್ಯ ಭೂಮಿಕೆ ಬರಬೇಕಾದರೆ ಶಿಕ್ಷಣ ಹಾಗೂ ಸಂಘಟನೆಯ ಅತೀ ಮುಖ್ಯ. ಅದಕ್ಕೆ ಶಿಕ್ಷಣಕ್ಕೆ ಮೊಟ್ಟ ಮೊದಲ ಆಧ್ಯತೆ ನೀಡಿ ಎಂದು ಹೇಳಿದರು.
ಆ ಒಂದು ಕಾರಣಕ್ಕೆ ಜಿಲ್ಲೆ, ತಾಲ್ಲೂಕು ಸೇರಿದಂತೆ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುವುದು ಅತ್ಯಂತ ಅವಶ್ಯಕ. ಹಾಗಾಗಿ ಎಲ್ಲರೂ ಕೈ ಜೋಡಸಿ ಸಮುದಾಯದ ಶಕ್ತಿ ತೋರಿಸೋಣ ಎಂದು ಹೇಳಿದರು.