ಇಂದು ಹೋರ್ತಿ – ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಛೇರಿ ಉದ್ಘಾಟನೆ
ಇಂಡಿ : ಸರಕಾರ ನಮ್ಮ ಭಾಗಕ್ಕೆ ಸಂಪೂರ್ಣ ನೀರಾವರಿ ಮಾಡಿದ್ರೆ, ಖಾಯಂ ಬರಗಾಲಕ್ಕೆ ಪ್ರಸಿದ್ಧವಾದ ಪ್ರದೇಶ ಕ್ಯಾಲಿಫೋರ್ನಿಯಾಗುತ್ತದೆ ಎಂದು ಕೆಬಿಜೆಎನ್ ಲ್ ಕಛೇರಿ ಹಾಗೂ ಕಾರ್ಯಾಲಯ ಉದ್ಘಾಟಿಸಿ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಸೋಮವಾರ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಅಡಿಯಲ್ಲಿ ಹೊರ್ತಿ- ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕಛೇರಿ ಹಾಗೂ ಕಾರ್ಯಾಲಯ ಉದ್ಘಾಟಿಸಿ ಮಾತಾನಾಡಿದರು.
ಸತತ ಬರಗಾಲಕ್ಕೆ ತುತ್ತಾಗಿರುವ ಈ ಜಿಲ್ಲೆಯ ಇತಿಹಾಸ ತೆಗೆದುಕೊಂಡರೆ, ಶೇಕಡಾ 75 ರಷ್ಟು ತೋಟಗಾರಿಕೆ ಬೆಳೆ ದ್ರಾಕ್ಷಿ, ದಾಳಿಂಬೆ ,ಲಿಂಬೆ ಬೆಳೆಯುತ್ತವೆ. ಅದಕ್ಕಾಗಿ ಸರಕಾರ ನೀರಾವರಿ ಜೊತೆಗೆ ರೈತರಿಗೆ ಪ್ರೊತ್ಸಾಹ ನೀಡಬೇಕು ಎಂದು ಹೇಳಿದರು. ಅದಲ್ಲದೇ ಕೆಬಿಜೆಎನ್ಎಲ್ ರಾಜ್ಯ ಕಚೇರಿ ಆಲಮಟ್ಟಿಯಲ್ಲಿ ಮಾಡಬೇಕು. ಆದರೆ ಹೊರ್ತಿಯಲ್ಲಿ ಉದ್ಘಾಟನೆಗೊಂಡ ಕಚೇರಿ ರೈತಾಪಿ ಜನರಿಗೆ ಸಕಾರಾತ್ಮಕ ಸೇವೆ ದೊರೆಯಲಿ ಇದರ ಉಪಯೋಗ ಸಾರ್ವಜನಿಕ ಪಡೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತಾನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು, ಸುಮಾರು ದಶಕಗಳಿಂದ ನಮ್ಮ ಭಾಗದಲ್ಲಿ ಜಲ್ವಂತ ಸಮಸ್ಯೆಗಳನ್ನು ಅನುಭವಿಸಿದ್ದೆವೆ. ಈ ಕ್ಷೇತ್ರದ ಧ್ವನಿಯಾಗಿ ಅನೇಕ ಬಾರಿ ಜಲ್ವಂತ ಸಮಸ್ಯಗಳ ಕುರಿತು ವಿಧಾನಸಭೆಯಲ್ಲಿ ಧ್ವನಿಮೊಳಗಿಸುವ ಕಾರ್ಯ ಮಾಡಿದ್ದೆನೆ. ಅದರ ಜೊತೆಗೆ ಪರಿವರ್ತನೆಯಾಗುವಂತೆ ಮನವೋಲಿಸುವ ಪ್ರಯತ್ನ ಮಾಡಿದ್ದು, ಅದರ ಸಫಲತೆ ಇಂದು ಕಾಣುತ್ತಿದ್ದೆವೆ ಎಂದು ಹೇಳಿದರು.
ನಮ್ಮ ಭಾಗದಲ್ಲಿ ಕುಡಿಯುವ ನೀರಿನ ಜಲ್ವಂತ ಸಮಸ್ಯೆ ಜೊತೆಗೆ ಬರದಿಂದ ತತ್ತರಿಸಿ ಹೋಗಿದ್ದು ಇದೆ. ಆದರೆ ನಿರುತ್ಸಾಹ ನಮ್ಮ ಜೀವನದ ಭಾಗವಾಗಬಾರದು, ಪ್ರಯತ್ನ ಮಾಡಿದ್ರೆ ಫಸಲು ಖಂಡಿತವಾಗಿಯೂ ಸಾಧ್ಯವಾಗುತ್ತದೆ. ಅದಕ್ಕೆ ಇಂದು ಸಾಕ್ಷಿ ಎಂದು ಹೇಳಿದರು. ಇಂಡಿ ಮತ್ತು ಚಡಚಣ ತಾಲೂಕಿನ ಸುಮಾರು 42 ಹಳ್ಳಿಗಳಿಗೆ ಹೊರ್ತಿ – ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಸಹಕಾರವಾಗಲಿದೆ. ಇಂಡಿ ಮತಕ್ಷೇತ್ರದಲ್ಲಿ 53,100 ಎಕರೆ ಜಮೀನು ಹಾಗೂ ನಾಗಠಾಣ ಮತಕ್ಷೇತ್ರದಲ್ಲಿ 16,100 ಎಕರೆ ಜಮೀನು ಪ್ರದೇಶ ಒಳಪಡುತ್ತದೆ. ನಮ್ಮ ಭಾಗದಲ್ಲಿ ಬರುವ ಅನೇಕ ಏತ ನೀರಾವರಿ ಯೋಜನೆಗಳು (ಟೆಲ್ ಎಂಡ್) ಕೊನೆಯ ಭಾಗದವರೆಗೆ ನೀರು ಹರಿಯುವುದು ತುಂಬಾ ಕಷ್ಟವಾಗಿತ್ತು. ಆದರೆ ಬಾರಿ ಗುತ್ತಿ ಬಸವಣ್ಣ ಏತ ನೀರಾವರಿ 99 ಕಿ.ಮೀ ದಿಂದ 155 ಕಿ.ಮೀ ವರೆಗೆ ನೀರು ಹರಿಸಿದ್ದು ಅದಲ್ಲದೇ ಯೋಜಿತ ಪ್ರದೇಶದ ಕೊನೆಯ ಭಾಗಕ್ಕೆ ಉಮರಜ, ದಸೂರ ವರೆಗೂ ನೀರು ಈ ಬಾರಿ ಹರಿದಿದೆ.ಇನ್ನೂ ತಡವಲಗಾ, ನಿಂಬಾಳ, ರಾಜನಾಳ, ಹಂಜಗಿ ಸೇರಿದಂತೆ ಸುಮಾರು 19 ಕೆರೆಗಳಿಗೂ ನೀರು ತುಂಬಿಸುವ ಪ್ರಯತ್ನ ಮಾಡಿದ್ದೆವೆ ಎಂದು ಹೇಳಿದರು.
ಈ ಭಾಗ ಅತ್ಯಂತ ಹಿಂದುಳಿದಿದ್ದು, ಈ ಪ್ರದೇಶ ಜಿಲ್ಲಾವಾದಾಗ ಅಭಿವೃದ್ಧಿ ಪ್ರಗತಿ ಚಿಂತನೆಯತ್ತ ಸಾಧಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಈ ನಾಡಿನ ಚಿಂತಕರು, ಹಿತೈಷಿಗಳು ಸ್ವಾಮಿಜಿಗಳು, ಮಠಾಧಿಶರು ಮತ್ತು ಸಂಘ, ಸಂಸ್ಥೆಗಳ ಸ್ವಯಂ ಪ್ರೇರಿತವಾಗಿ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ರೈತರ ಹಿತಕ್ಕಾಗಿ ಕೆಬಿಜೆಎನ್ ಕಛೇರಿ ಹಾಗೂ ಕಾರ್ಯಾಲಯ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಇಂದು ಉದ್ಘಾಟನೆಗೊಂಡಿದೆ. ಅದ್ದರಿಂದ ರೈತರು ಸುಮಾರು ಕಿ.ಮೀ ದೂರ ಅಲೆಯೊದು ತಪ್ಪುತ್ತದೆ. ನಿಮ್ಮ ಯಾವುದೇ ವಿಚಾರಗಳಿಗೂ ತುರ್ತು ಸ್ಪಂದಿಸುವ ಕಾರ್ಯ ಚಟುವಟಿಕೆಗಳು ಇಲ್ಲಿ ನಡೆಯುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಜಯಶ್ರೀ ಬೋಸಗಿ, ಸಿ.ಎಚ್ ಶ್ರೀನಿವಾಸ್ ಕೆಬಿಜೆನ್ಎಲ್ ಮುಖ್ಯ ಇಂಜಿನಿಯರ್ ಆಲಮಟ್ಟಿ, ಗೋವಿಂದ ರಾಠೋಡ ಅಧಿಕ್ಷಕ ಇಂಜಿನಿಯರ ಮುಲವಾಡ ಏತ ನೀರಾವರಿ ಆಲಮಟ್ಟಿ, ಸಂಗಮೇಶ ಮುಂಡಾಸ ಕಾರ್ಯಪಾಲಕ ಇಂಜಿನಿಯರ ದೇವರಹಿಪ್ಪರಗಿ, ಹನಮಂತಪ್ಪ ಗುಡಗುಂಟ ಸಹಾಯಕ ಇಂಜಿನಿಯರ, ವಿಶ್ವನಾಥ ಬಿರಾದಾರ ಸಹಾಯಕ ಇಂಜಿನಿಯರ, ಮನೋಜಕುಮಾರ ಗಡಬಳ್ಳಿ, ಸಂಬಾಜಿರಾವ್ ಮಿಸಾಳೆ, ಜಿ ಪಂ. ಮಾಜಿ ಸದಸ್ಯ ಮಹಾದೇವ ಪೂಜಾರಿ, ಗುರನಗೌಡ ಪಾಟೀಲ್, ಶ್ರೀಮಂತ ಇಂಡಿ, ಎಮ್ ಅರ್ ಪಾಟೀಲ್, ಪ್ರಕಾಶ್ ಪ್ಯಾಟಿ, ಸುರೇಶಗೌಡ ಪಾಟೀಲ್, ಭದ್ರೇಶ ಮಹಿಶಿ, ಜಾವಿದ ಮೋಮಿನ್, ಭೀಮಣ್ಣ ಕವಲಗಿ, ಜೆಟ್ಟಪ್ಪ ರವಳಿ, ರುಕ್ಮದಿನ ತದ್ದವಾಡಿ, ಕಲ್ಲನಗೌಡ ಬಿರಾದಾರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.