ಗೌರವ ಡಾಕ್ಟರೇಟ್ ಪಡೆದ ಎಂ ಎಂ ವಾಲೀಕಾರ ಗೆ ಸನ್ಮಾನ
ಇಂಡಿ: ತಾಲೂಕಿನ ತಾಂಬಾ ಗ್ರಾಮದ ಶಾಸಕರ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಎಂ ಎಂ ವಾಲೀಕಾರ ಅವರ ಜೀವನದ ಸಮಗ್ರ ಸಾಧನೆಯನ್ನು ಪರಿಗಣಿಸಿ ಡಾ// ರಾಧಾಕೃಷ್ಣನ್ ವೆಲ್ ಫೇರ್ ಅಸೋಸಿಯೇಷನ್ ಇಂಡಿಯಾ ಇವರ ಶಿಫಾರಸ್ಸಿನ ಮೇರೆಗೆ ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೇರಿಕ ಇವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದ್ದಾರೆ.
ಈ ನಿಮಿತ್ತ ಎಂ ಎಂ ವಾಲೀಕಾರ ಅವರಿಗೆ ಅಲ್ತಾಫ್ ಬೋರಾಮಣಿ, ಖಲೀಲ್ ಅತ್ತಾರ, ಕಾಸಿಂ ಮಕಾನದಾರ, ಮುಖ್ತಾರ್ ಅರಬ, ಶಿರಾಜಿ ಮೋಮಿನ್, ಹುಸೇನ್ ಟೇಲರ್, ಶಕೀಲ್ ಪಟೇಲ್ ಸೇರಿದಂತೆ ಅನೇಕರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.



















