ಆರೋಗ್ಯ “ರಕ್ಷಾ ಕವಚ” ಸಮಿತಿಯ ನೂತನ ನಾಮನಿರ್ದೇಶಿತ ಸದಸ್ಯರಿಗೆ ಸನ್ಮಾನ..!
ಇಂಡಿ: ಸರಕಾರಿ ಆಸ್ಪತ್ರೆಗೆ ಆರೋಗ್ಯ “ರಕ್ಷಾ ಕವಚ” ಸಮಿತಿಯ ನೂತನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ನಾಲ್ವರನ್ನು ಸಿ.ವಿ. ರಾಮನ್ ಪಿಯು ಕಾಲೇಜಿನಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ನಾಮನಿರ್ದೇಶಿತ ಸದಸ್ಯ ಸತೀಶ್ ಕುಂಬಾರ್, ಸಮಾಜದ ಸೇವೆ ಈಶ ಸೇವೆ ನಾವೆಲ್ಲರೂ ನಮ್ಮ ಕುಟುಂಬದ ಜೊತೆ ಸಮಾಜದ ಉದ್ಧಾರಕ್ಕಾಗಿ ಕೈಜೋಡಿಸಬೇಕು. ವಿದ್ಯಾರ್ಥಿಗಳ ಶ್ರದ್ಧೆಯಿಂದ ಓದಿ ಭವಿಷ್ಯದಲ್ಲಿ ಉತ್ತಮ ಅಧಿಕಾರಿ, ನಾಯಕರಾಗಬೇಕೆಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ವರ್ಧಮಾನ್ ಮಹಾವೀರ ಮಾತನಾಡಿ, ಸ್ಥಳಿಯ ಶಾಸಕರು ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ನಿಮ್ಮನ್ನು ಗುರುತಿಸಿ ಆರೋಗ್ಯ ರಕ್ಷಾ ಕವಚ ನಾಮನಿರ್ದೇಶನ ಮಾಡಿದ್ದು, ಶಾಸಕರ ಆಶಯದಂತೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಆಡಳಿತ ಮಂಡಳಿಯ ಇನ್ನೋರ್ವ ಸದಸ್ಯ ಸನ್ಮತಿ ಹಳ್ಳಿ ಮಾತನಾಡಿ ಸ್ವಸ್ಥ ಸಮಾಜಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಶಿವಾನಂದ ಕಾಮಗೊಂಡ ಮಾತನಾಡಿ ಅಲ್ಪ ಸಮಯವಾದರೂ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ತೊಡಗಿಸಬೇಕೆಂದು ಹೇಳಿದರು.
ನೂತನವಾಗಿ ಆಯ್ಕೆಯಾದ ಆರೋಗ್ಯ ರಕ್ಷಾಕವಚಚ ಸಮಿತಿಯ ಸದಸ್ಯರಾದ ಸುಧೀರ್ ಕರಕಟ್ಟಿ, ಸತೀಶ್ ಕುಂಬಾರ, ಡಾ. ರಾಜಶೇಖರ್ ತೋಳನೂರ ಮತ್ತು ರಾಜು ಪತಂಗೆ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು
ಸಂಸ್ಥೆಯ ಉಪಾಧ್ಯಕ್ಷ ಶೈಲೇಶ್ ಬಿಳಗಿ, ಪ್ರಸನ್ನಕುಮಾರ್ ನಾಡಗೌಡ, ಶೋಭಾ ನಾರಾಯಣಕರ್, ಶೈಲಜಾ ಜಾಗೀರದಾರ, ವೆಂಕಟೇಶಬಾಬು ಖೇಡಗಿ ಉಪಸ್ಥಿತರಿದ್ದರು.
ಇಂಡಿ : ತಾಲೂಕ ಆಸ್ಪತ್ರೆಯ ಆರೋಗ್ಯ ರಕ್ಷಾ ಕವಚ ಸಮಿತಿಯ ನೂತನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ನಾಲ್ವರನ್ನು ಸಿ.ವಿ. ರಾಮನ್ ಪಿಯು ಕಾಲೇಜಿನಲ್ಲಿ ಸತ್ಕರಿಸಿ ಗೌರವಿಸಲಾಯಿತು.