ಪಟ್ಟಣದಲ್ಲಿ ಬೆರಳೆಣಿಕೆ ಆಸ್ಪತ್ರೆಗಳು ಇದ್ದವು ಈಗ ಯುವ ವೈದ್ಯರು ಎಂಬಿಬಿಎಸ್ ಎಂಡಿ ಸ್ಪೆಷಲ್ ಮಾಡಿ ಆಸ್ಪತ್ರೆಗಳನ್ನು ಮಾಡುವ ಮೂಲಕ ಜನಸೇವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಬಿಜೆಪಿ ಮಂಡಲದಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಗೌರವ ಸನ್ಮಾನ
ಪ್ರಧಾನಮಂತ್ರಿ ನರೇಂದ್ರ ಮೋದಿಯವರರು ಎಲ್ಲಾ ರಂಗದವರನ್ನು ಖುದ್ದಾಗಿ ಗುರುತಿಸಿ ಸಭೆ ಮಾಡಿ ಅವರನ್ನು ಗೌರವಿಸುತ್ತಾರೆ ಅವರೇ ನಮಗೆ ಪ್ರೇರಣೆ: ಮಾಜಿ ಶಾಸಕ ನಡಹಳ್ಳಿ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಹಿಂದುಳಿದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಬೆರಳೆಣಿಕೆ ಆಸ್ಪತ್ರೆಗಳು ಇದ್ದವು ಈಗ ಯುವ ವೈದ್ಯರು ಎಂಬಿಬಿಎಸ್ ಎಂಡಿ ಸ್ಪೆಷಲ್ ಮಾಡಿ ಆಸ್ಪತ್ರೆಗಳನ್ನು ಮಾಡುವ ಮೂಲಕ ಜನಸೇವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜಾಧ್ಯಕ್ಷ್ಯ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದರು ಮಂಗಳವಾರ ತಮ್ಮ ತೋಟದ ಮನೆಯಲ್ಲಿ ಬಿಜೆಪಿ ಮಂಡಲದಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು ಪ್ರಧಾನಮಂತ್ರಿ ನರೇಂದ್ರ ಮೋದಿಯವರರು ಎಲ್ಲಾ ರಂಗದವರನ್ನು ಖುದ್ದಾಗಿ ಗುರುತಿಸಿ ಸಭೆ ಮಾಡಿ ಅವರನ್ನು ಗೌರವಿಸುತ್ತಾರೆ ಅವರೇ ನಮಗೆ ಪ್ರೇರಣೆ ಎಂದರು.
ವೈದ್ಯೋ ನಾರಾಯಣ ಹರಿ ಎಂಬಂತೆ ವೈದ್ಯರು ಸಾಕ್ಷತ್ ದೇವರು ಇದ್ದಂತೆ ವೈದ್ಯ ವೃತ್ತಿ ಪವಿತ್ರವಾದದು ಆ ಕಾಯಕದ ಮೂಲಕ ಜನಸೇವೆ ಮಾಡಬೇಕು ,ಮಾಧ್ಯಮ ಮತ್ತು ರಾಜಕೀಯ ಸಂಬಂಧ ಗಂಡ ಹೆಂಡತಿ ಇದ್ದಂತೆ ಅವರಿಲ್ಲದೆ ನಾವಿಲ್ಲ ನಾವಿಲ್ಲದೆ ಅವರಿಲ್ಲವೆಂದರು
ಹಿರಿಯ ವೈದ್ಯ ಎಸ್ ಬಿ ನಾಗೂರ, ಹಿರಿಯ ಪತ್ರಕರ್ತ ಡಿ ಬಿ ವಡವಡಗಿ ಮಾತನಾಡಿ ವೈದ್ಯರು ಮತ್ತು ಪತ್ರಕರ್ತರು ಸಮಾಜವನ್ನು ತಿದ್ದುವ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಸುವ ಮಾರ್ಗದರ್ಶಕರು ಇವರಿಬ್ಬರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ , ಅಗಲಿದ ವೈದ್ಯರತ್ನ ಆರ್ ಆರ್ ಪದಕಿಯವರ ಸೇವಾಮನೋಭಾವ ಇಂದಿನ ಯುವ ವೈದ್ಯರಲ್ಲಿ ಸಹ ಬರಬೇಕು ವೃತ್ತಿಯಲ್ಲಿ ದೇವರನ್ನು ಕಾಣಬೇಕು ಎಂದರು.
ಈ ವೇಳೆ ಬಿಜೆಪಿ ಹಿರಿಯ ಮುಖಂಡ ಎಂ.ಎಸ್ ಪಾಟೀಲ್ ಮಾತನಾಡಿದರು ,ಜಿಲ್ಲಾ ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾ.ವಿರೇಶ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲಾ ವೈದ್ಯರನ್ನು ಹಾಗೂ ಎಲ್ಲಾ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು ರಾಷ್ಟ್ರೀಯ ವೈದ್ಯಕೀಯ, ಪತ್ರಿಕಾ ದಿನಾಚರಣೆ ಅಂಗವಾಗಿ ನೆರಳೆ ಹಣ್ಣಿನ ಸಸಿ ನಡೆಸಿ ನೀರನ್ನು ಎರೆಯಲಾಯಿತು.
ವೇದಿಕೆಯಲ್ಲಿ ಡಾ.ಜಗದೇವಿ ನಾಗೂರ, ಗಂಗಾಧರರಾವ ನಾಡಗೌಡ, ಜಗದೀಶ ಪಂಪಣ್ಣನವರ, ಪ್ರಭು ಕಡಿ, ಮಲಕೇಂದ್ರಗೌಡ ಪಾಟೀಲ್, ಸಂಗನಗೌಡ ಪಾಟೀಲ್ ನಡಹಳ್ಳಿ ಉಪಸ್ಥಿತರಿದ್ದರು ಡಾ.ರಾಜೇಶ್ವರಿ ಗೂಳಿ ಪ್ರಾರ್ಥಿಸಿದರು,ಡಾ.ಸಿ ಕೆ ಶಿವಯೋಗಿಮಠ ಸ್ವಾಗತಿಸಿದರು ಡಾ.ರೇವಣಸಿದ್ದಪ್ಪ ಮಸೂತಿ ನಿರೂಪಿಸಿ ವಂದಿಸಿದರು, ಬಿಜೆಪಿ ಮಂಡಲದ ಪದಾಧಿಕಾರಿಗಳು ,ವೈದ್ಯಕೀಯ, ಮಾಧ್ಯಮ ಪ್ರಕೋಷ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸನ್ಮಾನ ಸಮಾರಂಭದಲ್ಲಿ ತಾಲೂಕು ವೈದ್ಯಾಧೀಕಾರಿ ಸತೀಶ್ ತಿವಾರಿ, ಆಡಳಿತ ವೈದ್ಯಾಧಿಕಾರಿ ಅನಿಲ್ ಶೇಗುಣಸಿ ಸೇರಿದಂತೆ ಪಟ್ಟಣದ ಎಲ್ಲಾ ವೈದ್ಯ ತಜ್ಞರು ವೈದ್ಯ ದಂಪತಿಗಳು ಹಾಗೂ ನಾಲತವಾಡ, ಮುದ್ದೇಬಿಹಾಳ ಸೇರಿದಂತೆ ಗ್ರಾಮಾಂತರ ಪ್ರದೇಶದ ಪತ್ರಕರ್ತರು ಭಾಗವಹಿಸಿ ಸನ್ಮಾನ ಸ್ವೀಕರಿಸಿದರು.
ಮುದ್ದೇಬಿಹಾಳ ಪಟ್ಟಣದಲ್ಲಿ ೬೨ ಗಾರ್ಡನ್ ಗಳಿವೆ ಪ್ರತಿಯೊಂದು ಗಾರ್ಡನ್ ಆಕ್ಸಿಜನ್ ಪಾರ್ಕ್ ಮಾಡಬಹುದು ವಿಶ್ವದಲ್ಲಿ ಕಾರ್ಬನ್ ಡೈಆಕ್ಸೈಡ್ ಸಮಸ್ಯೆ ನಿಯಂತ್ರಣಕ್ಕೆ ಆಕ್ಸಿಜನ್ ಪಾರ್ಕ್ ಮಾಡುವುದೆ ಪರಿಹಾರ ಇದಕ್ಕೆ ಪ್ರಾಕ್ಷತ್ಯೆಗೆಯಾಗಿ ನಮ್ಮ ತೋಟದ ೩ ಎಕರೆ ಜಾಗದಲ್ಲಿ ಆಕ್ಸಿಜನ್ ಪಾರ್ಕ್ ನಿರ್ಮಾಣ ಮಾಡಲಿದ್ದೇನೆ ಮತ್ತು ಪ್ರತಿ ನಗರದ ಮನೆಗೆ ಪ್ರೇಶ ಹಾಲನ್ನು ನೀಡಲು ಪಾರ್ಮ್ ಟು ಹೋಮ್ ಮೂಲಕ ಹಸುವಿನ ಹಾಲನ್ನು ನೀಡಲು ಚಾಲನೆಯನ್ನು ನೀಡಲಾಗುತ್ತದೆ ೧ ಲಕ್ಷ ಎಕರೆ ಸಾವಯವ ಕೃಷಿಗೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ರೈತರ ಜಮೀನಿಗೆ ನೀರಾವರಿ ಮೂಲಕ ನೀರು ೧೨ ಗಂಟೆ ವಿದ್ಯುತ್ ಪೂರೈಕೆ ಆಗಬೇಕು ; ಎ.ಎಸ್ ಪಾಟೀಲ್ ನಡಹಳ್ಳಿ