ವಿಜಯಪುರ : ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆಸಿದೆ. ಸಾಯಿ ಲಕ್ಷ್ಮಣ ಪವಾರ್ ಹಾಗೂ ಸಂದೀಪ್ ಚಂದ್ರಾಜ್ ಬಿರಾದಾರ ಬಂಧಿತ ಆರೋಪಿಗಳು. ಇನ್ನು ಎರಡು ಮನೆಗಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಂದ 70 ಗ್ರಾಂ ಬಂಗಾರ, 170 ಗ್ರಾಂ ಬೆಳ್ಳಿ ದೇವರ ಮೂರ್ತಿ, ಒಂದು ಮೊಬೈಲ್ ಸೇರಿದಂತೆ 3.68 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.