ಪ್ರವಾಹ ಮಳೆ ಹಾನಿ ಪರಿಹಾರಕ್ಕೆ ಪ್ರಾಮಾಣಿಕ ಯತ್ನ – ಸಚಿವ ಎಂ.ಬಿ.ಪಾಟೀಲ
ಇಂಡಿ : ಭೀಮಾ ನದಿಗೆ ಪ್ರವಾಹ ಮತ್ತು ತಾಲೂಕಿನಲ್ಲಿ ಮಳೆಯಿಂದ ಆದ ಬೆಳೆ ಹಾನಿ ಕುರಿತು ಸರಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಸಚಿವ ಎಂ.ಬಿ.ಪಾಟೀಲರು ಹೇಳಿದರು.
ತಾಲೂಕಿನ ರೋಡಗಿ ಗ್ರಾಮದಲ್ಲಿ ಭೀಮಾ ನದಿಗೆ ಪ್ರವಾಹ ವೀಕ್ಷಿಸಲು ಆಗಮಿಸಿದ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಮುಖ್ಯಮಂತ್ರಿಯವರು ಚರ್ಚಿಸಿದ್ದು ಅವರಿಗೆ ಮನವರಿಕೆ ಮಾಡಲಾಗಿದೆ. ಈ ಬಾರಿ ವಿಜಯಪುರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅದಲ್ಲದೆ ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳು ಪ್ರವಾಹ ಎದುರಿಸುತ್ತಿವೆ. ಕಾರಣ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಸಾಧ್ಯತೆ ಇದೆ ಎಂದರು.
ರೋಡಗಿ ಗ್ರಾಮವನ್ನು ಸ್ಥಳಾಂತರಿಸುವ ಕುರಿತು ಮನವಿ ಸಲ್ಲಿಸಿದ್ದು ಅದನ್ನು ಸರಕಾರ ಗಮನಕ್ಕೆ ಸದನದ ಗಮನಕ್ಕೆ ತರುವದಾಗಿ ತಿಳಿಸಿದರು.
ಇದೇ ಮೊದಲ ಬಾರಿಗೆ ಸೀನಾ ನದಿಯಿಂದ ಹೆಚ್ಚಿನ ಪ್ರಮಾಣ ನೀರು ಬಿಟ್ಟಿದ್ದು ಸಮಸ್ಯೆಗೆ ಕಾರಣ ವಾಗಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ಈಗಾಗಲೇ ಇಂಡಿ ತಾಲೂಕಿನಲ್ಲಿ ೪೭೬ ಕೋಟಿ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ. ಅದಲ್ಲದೆ ದೀರ್ಘಾವಧಿ ಮತ್ತು ಅಲ್ಪಾವಧಿ ಪರಿಹಾರ ಪಡೆದು ಕೊಳ್ಳುವ ಆಶಾ ಭಾವನೆ ಇದೆ. ಮೂರು ವರ್ಷಕ್ಕೊಮ್ಮೆ ಪ್ರವಾಹ ಬರುತ್ತಿದ್ದು ಅದಕ್ಕೆ ದೀಘ್ರಾವಧಿ ಪರಿಹಾರಕ್ಕಾಗಿ ಸರಕಾರದ ಗಮನಕ್ಕೆ ತಂದಿರುವದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಆನಂದ ಮತ್ತು ಸಂಗಣ್ಣ ಈರಾಬಟ್ಟೆ ಮಾತನಾಡಿದರು.
ವೇದಿಕೆಯ ಮೇಲೆ ಸಿಇಒ ರಿಷಿ ಆನಂದ, ಪೋಲಿಸ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ. ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ, ತಹಸೀಲ್ದಾರ ಬಿ.ಎಸ್,ಕಡಕಬಾವಿ ಮತ್ತಿತರಿದ್ದರು.
ಇಂಡಿ ತಾಲೂಕಿನ ರೋಡಗಿ ಗ್ರಾಮದಲ್ಲಿ ಭೀಮಾ ಪ್ರವಾಹ ವೀಕ್ಷಿಸಿ ಸಚಿವ ಎಂ.ಬಿ.ಪಾಟೀಲರು ಮಾತನಾಡಿದರು.