ಕುಲಪತಿಗಳಿಂದ ಗೃಹ ವಿಜ್ಞಾನ
ಪ್ರಯೋಗಾಲಯ ಉದ್ಘಾಟನೆ.
ಇಂಡಿ : ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಇಂಡಿ,
ವತಿಯಿಂದ. ಇಂಡಿ, ಸಿಂದಗಿ, ಚಡಚಣ, ಆಲಮೇಲ್, ದೇವರಹಿಪ್ಪರಗಿ ಮಹಿಳೆಯರು ತಮ್ಮ ಕೌಶಲ್ಯವನ್ನು
ಹೆಚ್ಚಿಸಿಕೊಂಡು ಆರ್ಥಿಕ ಸ್ವಾಲಂಬನೆ ಹೊಂದಲು
ಅನಕೂಲವಾಗುವಂತೆ ನಿಟ್ಟಿನಲ್ಲಿ ಸುಸಜ್ಜಿತವಾದ
ಗೃಹ ವಿಜ್ಞಾನ ಪ್ರಯೋಗಲಾಯವನ್ನು ಡಾ. ಪಿ ಎಲ್.
ಪಾಟೀಲ, ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ ಧಾರವಾಡ ಉದ್ಘಾಟನೆಯನ್ನು ನೇರವೆರಿಸಿದರು.
ಕುಲಪತಿ ಪಾಟೀಲ ಮಾತನಾಡಿ ಈ ಭಾಗದಲ್ಲಿ
ರೈತರು ತಮ್ಮ ಕ್ಷೇತ್ರದಲ್ಲಿ ತೋಟಗಾರಿಕೆ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ ಇನ್ನಿತರ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕೃಷಿ ಬೆಳೆಗಳಾದ ತೊಗರಿ, ಗೋದಿ,
ಮತ್ತು ಕಡಲೆ ತಾವು ಬೆಳೆದಂತಹ ಬೆಳೆಗಳನ್ನು ರೈತರು
ನೇರವಾಗಿ ಮಾರುಕಟ್ಟೆಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ, ರೈತರು ಹೆಚ್ಚಿನ ಆದಾಯ ಪಡೆಯಲು ತಾವು ಬೆಳೆದಂತಹ ಬೆಳೆಗಳಿಗೆ ಮೌಲ್ಯವರ್ಧನೆಗೊಳಿಸಿ.
ಇನ್ನು ಹೆಚ್ಚಿನ ರೀತಿಯಲ್ಲಿ ಆದಾಯ ಪಡೆದುಕೊಳ್ಳುವ ಉದ್ದೇಶದಿಂದ ರೈತರು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧನೆ ಬಗ್ಗೆ ಗೃಹ ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುವುದು. ಅದೇ ರೀತಿಯಾಗಿ
ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ, ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ರಕ್ತಹೀನತೆಯಿಂದ ಬಳಲುವಂತಹ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಪೋಷಕಾಂಶಗಳ ಬಗ್ಗೆ ಮಾಹಿತಿಯನ್ನು
ನೀಡಲಾಗುವುದು. ಪೋಷಕಾಂಶಯುಕ್ತ ಆಹಾರವನ್ನು ತಯಾರಿಸುವುದರ ಬಗ್ಗೆ ಪ್ರಾಯೋಗಿಕವಾಗಿ ತೋರಿಸಲಾಗುವುದು. ರೈತರು ರೈತ ಮಹಿಳೆಯರಿಗೆ ಬೆಳೆದಂತಹ ಬೆಳೆಗಳಿಗೆ ಹೆಚ್ಚಿನ ಆದಾಯ ಕಲ್ಪಿಸಲು ಸಣ್ಣ
ಉದ್ದಿಮೆದಾರರಾಗಲು ಆಹಾರ ಉತ್ಪನ್ನಗಳನ್ನು
ತಯಾರಿಸಲು ತರಬೇತಿ ಮುಖಾಂತರ
ತಯಾರಿಸಿದಂತಹ ಆಹಾರ ಉತ್ಪನ್ನಗಳನ್ನು
ಪ್ಯಾಕಿಂಗ್, ಬ್ರಾಂಡಿಂಗ್, ಬೆಲೆ ನಿಗದಿಕರಿಸುವಿಕೆ,
ಮಾರುಕಟ್ಟೆಗೆ ಜೋಡಣೆ. ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದರು.
ವಿಶ್ವವಿದ್ಯಾಲಯದ ಅಧಿಕಾರಿಗಳಾದ ಸಂಶೋಧನಾ
ನಿರ್ದೇಶಕರು ಡಾ ಬಿ ಡಿ. ಬಿರಾದಾರ, ಡಾ ವಾಯ್.ಕೆ. ಮಿರಜಕರ್, ಕಾಳಪ್ಪನವರ್, ಬಿ ಡಿ. ಚವ್ಹಾಣ, ಡಾ. ಆರ್.ಬಿ. ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು, ಡಾ. ಕಾಶಿಬಾಯಿ ಖ್ಯಾಡಗಿ, ಹಾಗೂ ಡಾ ಶಿವಶಂಕರಮೂರ್ತಿ ಎಂ,. ಡಾ ಸವಿತಾ ಬಿ.ಡಾ. ವೀಣಾ ಚಂದಾವರಿ, ಪ್ರಕಾಶ ಜಿ. ಮತ್ತಿತರಿದ್ದರು.