ವಿಜಯಪುರ: ಮಾಧ್ಯಮ ವರದಿಗಾರರು ಇಂದು ಸಂಭ್ರಮ ಸಡಗರದಿಂದ ಒಬ್ಬರಿಗೊಬ್ಬರು ವಿವಿಧ ಬಗೆಯ ಬಣ್ಣಗಳನ್ನು ಎರಚಿ ಹೋಳಿ ಹಬ್ಬವನ್ನು ನಗರದ ಜಿಲ್ಲಾ ಪಂಚಾಯತ ಆವರಣದಲ್ಲಿರುವ ಪತ್ರಿಕಾ ಭವನದ ಆವರಣದಲ್ಲಿ ಆಚರಣೆ ಮಾಡಿದರು. ಜಿಲ್ಲಾ ಮಾಧ್ಯಮ ಬಳಗದವರು ನೈಸರ್ಗಿಕ ಬಣ್ಣವನ್ನು ಹಚ್ಚಿಕೊಂಡು ಹೋಳಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿ ಸಂಭ್ರಮಿಸಿದರು. ಅಲ್ಲದೆ ಸಂಪ್ರದಾಯದಂತೆ ಖಡಕ್ ರೊಟ್ಟಿ, ಪಲ್ಯೆ ಸವಿದು ಹೋಳಿ ಹಬ್ಬಕ್ಕೆ ಮಾಧ್ಯಮ ಮಿತ್ರರು ಮೆರುಗು ತಂದರು.