ಶೇ.೧೦೦ ರ ಗುರಿ ಮುಟ್ಟಿ – ಮನಮುಟ್ಟಿದ ಮನ್ ಕೀ ಬಾತ್
ವಿಜಯಪುರ : ಪ್ರತಿ ತಿಂಗಳ ಕೊನೆಯ್ ಭಾನುವಾರ ಪ್ರಸಾರವಾಗಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿಯವರಮನ್ ಕಿ ಬಾತ್ ಕಾರ್ಯಕ್ರಮ ಜಿಲ್ಲೆಯ ಎಂಟು ಭೂತ್‌ಗಳಲ್ಲಿ ಶೇ.೧೦೦ ರಷ್ಟು ಸರಳ ತಂತ್ರಾಶದಲ್ಲಿ ಅಪಲೋಡ್ ಆಗಿದ್ದು ಲಕ್ಷಾಂತರ ಕಾರ್ಯಕರ್ತರು ವಿಚಾರಗಳನ್ನು ಆಲಿಸಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರ, ದೇವರಹಿಪ್ಪರಗಿ, ನಾಗಠಾಣ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.೧೦೦ ರಷ್ಟು ಭೂತ್‌ಗಳಲ್ಲಿ ಸರಳ ಆ್ಯಪ್ ನಲ್ಲಿ ಅಪ್ಲೋಡ್ ಮಾಡಲಾಗಿದೆ,
೨೦೯೨ ಬೂತಗಳ ಪೈಕಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಸುಮಾರು ೧೬೦೦
ಭೂತಗಳಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಿ ಸರಳ ಆಪ್ ನಲ್ಲಿ ಅಪ್ಲೋಡ್ ಮಾಡಿರುವುದು ಸಹ ಗಮನಾರ್ಹ ಸಂಗತಿ, ಪ್ರಧಾನಿ ಮೋದಿ ಅವರ ಈ ಮನದಾಳದ ಮಾತುಗಳಿಗೆ ಜನರು ಎಷ್ಟು ಮೆಚ್ಚುತ್ತಾರೆ ಎಂಬುದಕ್ಕೆ ಇದೇ ಉದಾರಹರಣೆ, ಮೋದಿ ಅವರ ವಿಚಾರಗಳು ಎಲ್ಲರಿಗೂ ಸ್ಪೂರ್ತಿ ನೀಡುತ್ತವೆ ಎಂದು ಜಿಗಜಿಣಗಿ ಹೇಳಿದ್ದಾರೆ.
ಅದೇ ತೆರನಾಗಿ ರಸಗೊಬ್ಬರಕ್ಕೆ ಸಬ್ಸಿಡಿ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ಕೊಡುಗೆ ನೀಡಿದೆ, ಆ ಮೂಲಕ ಮತ್ತೊಮ್ಮೆ ತಾನು ರೈತಪರ ಎಂದು ಸಾಬೀತುಪಡಿಸಿದೆ, ಪ್ರತಿ ಕೆಜಿ ನೈಟ್ರೋಜನ್ ಮೇಲೆ ೪೩.೨ ರೂ., ಫಾಸ್ಪರಸ್ ಮೇಲೆ ೪೭.೯೬ ರೂ. ಸೇರಿದಂತೆ ವಿವಿಧ ರಸಗೊಬ್ಬರಗಳ ಮೇಲೆ ಸಬ್ಸಿಡಿ ನೀಡುವ ನಿರ್ಧಾರ ಕೈಗೊಂಡಿರುವುದು ರೈತರಿಗೆ ಸುಲಭ ದರದಲ್ಲಿ ರಸಗೊಬ್ಬರ ದೊರಕುವುದು ಸಾಧ್ಯವಾಗಲಿದೆ, ಇದು ರೈತಪರ ನಿರ್ಧಾರ ಎಂದು ಅವರು ಹೇಳಿದ್ದಾರೆ.










