ತ್ಯಾಗ, ಸಹನೆ ಮತ್ತು ಪರಿಶ್ರಮ ಬಕ್ರೀದಿನದ ಇತಿಹಾಸ..!
ಇಂಡಿ : ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ವಾದರ್ಶಗಳನ್ನು ಬಕ್ರೀದಿನ ಇತಿಹಾಸ, ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಇಂದು ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ ಎಂದು ಧರ್ಮ ಗುರು ಮೌಲಾನ ಶಾಕೀರ್ ಹುಸೇನ್ ಕಾಸ್ಮಿ ಮುಪ್ತಿ ಮಾತನಾಡಿದರು.
ಪಟ್ಟಣದ ಹೊರ್ತಿ ರಸ್ತೆಯ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೇರದಿದ್ದ ಜನ ಸಮುದಾಯದಲ್ಲಿ ಪ್ರಾಥನೆ ಸಲ್ಲಿಸಿ ಬೋಧನೆ ನೀಡಿದರು . ಬಕ್ರೀದ್ ಹಬ್ಬದ ಆಚರಣೆ ದಾನ ಧರ್ಮದ ಮಹತ್ವದ ಕುರಿತು ಬೋಧನೆಯನ್ನು ಮಾಡಿದರು. ಸಮಾಜದಲ್ಲಿ ಎಲ್ಲಾ ವರ್ಗದ ಜೊತೆ ಸಹೋದರಂತೆ ಬಾಳಬೇಕು. ತದನಂತರ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು.
ಬಕ್ರೀದ್ ಹಬ್ಬದ ಆಚರಣೆಗೆ ಯಾವುದೆ ತೊಂದರೆ ಮತ್ತು ಅಹಿತಕರ ಘಟನೆಗಳು ನಡೆಯದಂತೆ ನಗರ ಪೋಲಿಸ ಠಾಣೆಯ ಸಿಪಿಆಯ್ ರತನ ಕುಮಾರ ಜಿರಗಿಹ್ಯಾಳ ಸೂಕ್ತ ಬಂಧು ಬಸ್ತ ವ್ಯವಸ್ಥೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಬ್ದುಲ್ ರೆಹಮಾನ್ ಅರಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಪುರಸಭೆ ಸದಸ್ಯ ಅಯೂಬ್ ಬಾಗವಾನ,ಅಸ್ಲಾಂ ಕಡಣಿ, ಶಬ್ಬೀರ್ ಕಾಜಿ,ಮುಸ್ತಾಕ್ ಇಂಡೀಕರ್, ಜಹಾಂಗೀರ್ ಸೌದಾಗರ, ಇಸ್ಮಾಯಿಲ್ ಅರಬ,ಮಹಿಬೂಬ್ ಅರಬ,ಅಬ್ದುಲ್ ರಹೀದ್ ಅರಬ,ಅಬ್ದುಲ್ ರಹೀದ್ ಮುಗಲೇ, ಸಮಾಜ ಸೇವಕ ಹಸನ ಮುಜಾವರ,ಫಾರೂಕ್ ತುರ್ಕಿ,ರಫೀಕ್ ಇಂಡೀಕರ್,ಬಶೀರ್ ಇನಾಮದಾರ, ಜೇನುದ್ದೀನ್ ಬಾಗವಾನ, ಷರೀಫ್ ಪಟೇಲ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.