ಇಂಡಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ..!
ಇಂಡಿ : ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ೬ ಗಂಟೆಗೆ ಪೂಜೆ ಸಲ್ಲಿಸಿ ಬಸವೇಶ್ವರ ವೃತ್ತದ ಮೂಲಕ ಎಲ್ಲರೂ ಬಸವರಾಜೇಂದ್ರ ದೇವಸ್ಥಾನದಲ್ಲಿ ಸೇರಿ ಪೂಜೆ ಸಲ್ಲಿಸಿ ನಂತರ ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಇವರ ಮನೆಯಲ್ಲಿ ಪ್ರಸಾದ ಸೇವಿಸಿ ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸಿದರು.
ಇಂಡಿ ಯಿಂದ ಸಾಲೋಟಗಿ,ಆಲಮೇಲ,ಸಿಂದಗಿ, ಯಂಕಂಚ, ಗೋಲಗೇರಿ, ಭೀಮರಾಯನಗುಡಿ, ಶಹಾಪುರ, ಹತ್ತಿಗುಡುರ, ದೇವದುರ್ಗ, ರಾಯಚೂರ, ಆಂಧ್ರದ ಶಾಂತಿನಗರ, ಆಲಮಪೂರ ನಿಂದ ಶ್ರೀಶೈಲಕ್ಕೆ ತೆರಳುವರು.
ಸುಮಾರು ೧೨ ದಿವಸ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು.
ಇಂಡಿ ಯಿಂದ ತಂಡಗಳ ರೂಪದಲ್ಲಿ ತೆರಳುತ್ತಿದ್ದು ತಾಲೂಕಿನ ಅನೇಕ ಗ್ರಾಮಗಳಿಂದಲೂ ಭಕ್ತರು ಪಾದಯಾತ್ರೆಯಲ್ಲಿದ್ದಾರೆ.
ಇಂಡಿ ತಾಲೂಕಿನಿಂದ ಅಂದಾಜು ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇಂಡಿಯ ಶಾಂತಪ್ಪ ದೇವರ, ಬಾಬುರಾಯ ಕುಡಿಗನೂರ, ಶಾಂತಯ್ಯ ಸ್ಥಾವರಮಠ, ಪರುತಯ್ಯ ಮಠ, ಸುಭಾಸ ಬಡಿಗೇರ, ದುಂಡಪ್ಪ ದೇವರ, ಭೀಮರಾಯ ಕುಂಬಾರ, ಶಿವಶರಣ ಬಾರಿಕಾಯಿ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.
ಇಂಡಿ ಪಟ್ಟಣದ ಬಸವರಾಜೇಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತಾಧಿಗಳು ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸಿದರು..