ಸರ್ಕಾರಿ ಐಟಿಐ ಜೇವರ್ಗಿಯಲ್ಲಿ ಉನ್ನತ ಮಟ್ಟದ ತರಬೇತಿಯನ್ನು ನೀಡಲಾಗುತ್ತಿದೆ: ಡಾ.ರುಬಿನಾ ಪರ್ವಿನ್
ವರದಿ : ಉಮೇಶ್ ಅಚಲೇರಿ, ಅಫಜಲಪುರ, ಕಲ್ಬುರ್ಗಿ ಜಿಲ್ಲೆ
ಜೇವರ್ಗಿ: ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಕೌಶಲ್ಯದ ಅರಿವು ಕಾರ್ಯಕ್ರಮ’ವನ್ನು ಕಳೆದ ದಿನಾಂಕ: 16-05-2025 ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಸ.ಕೈ.ತ.ಸಂಸ್ಥೆಯ ಪ್ರಾಚಾರ್ಯರಾದ ಡಾ. ರುಬಿನಾ ಪರ್ವಿನ್ ಅವರು ಮಾತನಾಡಿ ಇಲ್ಲಿಯವರೆಗೆ ಸಂಸ್ಥೆಯು ಬೆಳೆದುಕೊಂಡು ಬಂದ ಹಾದಿಯ ಕುರಿತು ಸಂಕ್ಷೇಪವಾಗಿ ಮಾತನಾಡಿದರು. ಅದೇರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಕೌಶಲ್ಯ ಆಧಾರಿತ ಕೋರ್ಸ್ಗಳ ದೇಶದಲ್ಲಿ ಹಾಗೂ ವಿದೇಶದಲ್ಲಿಯೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು ಈ ನಿಟ್ಟಿನಲ್ಲಿ ಸರ್ಕಾರಿ ಐಟಿಐ ಜೇವರ್ಗಿಯಲ್ಲಿ ನೀಡಲಾಗುವ ಉನ್ನತ ಮಟ್ಟದ ತರಬೇತಿಯ ಜೋತೆಗೆ ವಿವಿಧ ವ್ಯಕ್ತಿಗಳಲ್ಲಿ ಹಲವಾರು ಕೌಶಲ್ಯ ಕಲಿಕೆಯ ಜೊತೆಗೆ ತರಬೇತಿದಾರರಿಂದ ಸರ್ಕಾರದಿಂದ ವಿಶೇಷ ಸವಲತ್ತುಗಳನ್ನು ಹಾಗೂ ವಿದ್ಯಾರ್ಥಿಗಳ ವೇತನಗಳನ್ನು ನೀಡಲಾಗುತ್ತಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ.ಮೀನಾಕ್ಷಿ ಬಾಳಿಯವರು ಕೂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಅನ್ನಪೂರ್ಣ ಆರ್,ಸಂಗೋಳಗಿ, ಶ್ರೀಮತಿ ಕೆ.ನೀಲಾ ಮತ್ತು ಶ್ರೀಮತಿ ಲಲಿತ್ರಾ ವಸ್ರ್ತದ ಎಲ್ಲಾ ಗಣ್ಯರು ಉಪಸ್ಥಿತಿಯಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಇದೆ ಸಂದರ್ಭದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು, ಕಾರ್ಮಿಕ ವರ್ಗದವರು, ಸಂಸ್ಥೆಯ ಸಿಬ್ಬಂದಿಗಳು, ತರಬೇತಿದಾರರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.