ಇಂಡಿ: ಪ್ರತಿಯೊಬ್ಬ ವಿಕಲಚೇತನರು ತಪ್ಪದೇ ತಪಾಸಣೆ
ಮಾಡಿಸಿಕೊಂಡು ಉಚಿತ ಆರೋಗ್ಯ ತಪಾಸಣೆಯ
ಸದುಪಯೋಗ ಪಡೆದುಕೊಳ್ಳಬೇಕು ಎಂದು
ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಮೇಶ ಹೂಗಾರ
ಹೇಳಿದರು.
ಗುರುವಾರ ತಾಲೂಕಿನ ಆಳೂರ ಗ್ರಾಮದ ಗ್ರಾಮ
ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡಿದ್ದ
ವಿಕಲಚೇತನರ ಸಂಘಟನೆಯಿಂದ 25 ರಿಂದ 70 ವರ್ಷದ ಒಳಗಿನ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಒತ್ತಡದ ಜೀವನದಲ್ಲಿ ಆರೋಗ್ಯದ ಕಾಳಜಿ ವಹಿಸದೇ
ಇರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಕಾರಣ ಪ್ರತಿಯೊಬ್ಬರೂ
ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು
ಆರೋಗ್ಯವಾಗಿದ್ದರೆ ಮಾತ್ರ ಏನನ್ನಾದರೂ ಸಾಧಿಸಲು
ಸಾಧ್ಯ. ಇಂತಹ ತಪಾಸಣೆ ಶಿಬಿರಗಳ ಸದುಪಯೋಗ
ಪಡೆದುಕೋಬೇಕು ಎಂದರು.
ಈ ಸಂದರ್ಭದಲ್ಲಿ ವಿ.ಆರ್.ಡಬ್ಲ್ಯೂ ಭೀಮಾಶಂಕರ
ಗುಡ್ಡೇವಾಡಿ, ಪತ್ರಕರ್ತ ಯಲಗೊಂಡ ಬೇವನೂರ,
ಚಂದ್ರಕಾಂತ ದೌಲಿ, ತಾಲೂಕಾ ಕೆ.ಎಚ್.ಪಿ.ಟಿ. ಸಂಯೋಜಕ ಶಿವಾನಂದ ಸಿಂಗೆ, ಗ್ರಾಪಂ ಸದಸ್ಯರು, ಗ್ರಾಪಂ ಕಾರ್ಯದರ್ಶಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ವಿಕಲಚೇತನರು ಭಾಗವಹಿಸಿದ್ದರು
ಇಂಡಿ: ತಾಲೂಕಿನ ಆಳೂರ ಗ್ರಾಮದಲ್ಲಿ ವಿಕಲಚೇತನರ ಸಂಘಟನೆಯಿಂದ 25 ರಿಂದ 70 ವರ್ಷದ ಒಳಗಿನ ವಿಲಚೇತನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.