ವಿಜಯಪುರ : ಆಕಸ್ಮಿಕ ಅಗ್ನಿ ಅವಘಡದಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೂಡಗಿ ಎನ್‌ಟಿಪಿಸಿಯಲ್ಲಿನ ವೇಸ್ಟೇಜದ ಸಾಮಗ್ರಿಗಳು ಭಸ್ಮವಾಗಿರುವ ಘಟನೆ ಸಂಭವಿಸಿದೆ.
ಪೆಟ್ರಾನ್ ಎಂಬ ಕಂಪನಿಯ ಆವರಣದಲ್ಲಿನ ತ್ಯಾಜ್ಯ ಸಾಮಗ್ರಿಗಳು ಭಸ್ಮಗೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಎಲ್ಲೆಡೆಯೂ ಬೆಂಕಿ ಧಗಧಗಿಸಿತ್ತು. ಎಲ್ಲೆಡೆ ಹೊಗೆಯ ವಾತಾವರಣ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು. ಕೂಡಗಿ ಎನ್‌ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.