ವೈದ್ಯರ ದಿನದ ಅಂಗವಾಗಿ ಆರೋಗ್ಯ ಶಿಬಿರ
ವಿಜಯಪುರ : ಸಿಕ್ಯಾಬ್ ಲುಕ್ಮಾನ್ ಯುನಾನಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಸಿಕ್ಯಾಬ್ ಆಂಗ್ಲ ಮಾಧ್ಯಮ ಕೆ ಜಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ನವರಸಪುರ ನಲ್ಲಿ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ವೈದ್ಯರ ದಿನದ ಸಂದರ್ಭದಲ್ಲಿ, ಸಿಕ್ಯಾಬ್ ಆಂಗ್ಲ ಮಾಧ್ಯಮ ಕೆ ಜಿ, ಪ್ರಾಥಮಿಕ ಮತ್ತು ಪ್ರೌಢಶಾಲೆಯ 5 ರಿಂದ 16 ವರ್ಷ ವಯಸ್ಸಿನ 600 ಕ್ಕೂ ಹೆಚ್ಚು ಮಕ್ಕಳನ್ನು 24 ವೈದ್ಯರು ಮತ್ತು ಅರೆವೈದ್ಯರು ಪರೀಕ್ಷಿಸಿದರು. ಅವರು ಮಕ್ಕಳನ್ನು ಪರೀಕ್ಷಿಸಿ ಮೌಲ್ಯಮಾಪನ ವರದಿಯನ್ನು ನೀಡಿದರು.
ಹೆಚ್ಚಿನ ಮೌಲ್ಯಮಾಪನಗಳು ಮತ್ತು ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ಅನುಸರಣೆಗಾಗಿ ಸೂಚಿಸಲಾಯಿತು. ಸಿಕ್ಯಾಬ್ ಆಂಗ್ಲ ಮಾದ್ಯಮ ಶಾಲೆಯು ತಮ್ಮ ಮಕ್ಕಳ ಆರೋಗ್ಯ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಸಿಕ್ಯಾಬ್ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜಿನ ಡಾ. ನಿಕಹತ ಇನಾಮಾದಾರ, ಡಾ. ಸಬಾ ಮಮದಾಪೂರ, ಡಾ. ಸುಮಯ್ಯಾ ಬೇಗಂ, ಸಿಕ್ಯಾಬ್ ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲರಾದ ಅನಿತಾ ನರೇಗಲ, ಪೂರ್ವ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ಫಾತಿಮಾ ಜಮಾದಾರ ಹಾಗೂ ಶಾಲೆಯ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.