ದಲಿತ ಕುಟುಂಬಕ್ಕೆ ಕಿರುಕುಳ, ಆ ಅಧಿಕಾರಿಯನ್ನು ಅಮಾನತು ಮಾಡಲು ಆಗ್ರಹ
ವಿಜಯಪುರ | ಈ ಪ್ರಕರಣ ನಡೆದಿದ್ದು ನಡೆದದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೋಲಿಸ್ ಠಾಣೆಯಲ್ಲಿ.ಬಾಗೇವಾಡಿ ನಗರದಲ್ಲಿ ದಲಿತ ಕುಟುಂಬವಂದು ತನ್ನ ಪರಿವಾರದೊಂದಿಗೆ ನಿದ್ರೆಯಲ್ಲಿ ಇರುವಾಗ ಬಾಗೇವಾಡಿ ನಗರದಲ್ಲಿ ಸುಮಾರು ಬೆಳಗಿನ ಜಾವ 5:30 ಸುಮಾರಿಗೆ ಮನೆಯ ಬಾಗಿಲು ತಟ್ಟಿ ಮನೆಯಲ್ಲಿದ್ದ ಮಹಿಳೆಯರನ್ನು ಮಕ್ಕಳನ್ನು ಮನೆಯಿಂದ ಹೊರಹಾಕಿ ಅಕ್ರಮವಾಗಿ ಮನೆ ಪ್ರವೇಶ ಮಾಡಿ ನೀವು ನಮಗೆ ಸಹಕರಿಸದೇ ಇದ್ದರೆ ನಿಮ್ಮ ಮೇಲೆ ಕೇಸ ದಾಖಲಿಸುವದಾಗಿ ಹೇಳಿ ಇಡೀ ಕುಟುಂಬವನ್ನು ಹೆದರಿಸುವ ಕೆಲಸ ಮಾಡಿದ್ದಾರೆ.
ಬಸವಣ್ಣ ಹುಟ್ಟಿದ ನಾಡಿನಲ್ಲಿ ಇಂದಿಗೂ ಜಾತೀಯತೆ ,ಅಸಮಾನತೆ ತಾಂಡವ ಆಡುತ್ತಿದೆ.ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಸವನ ಬಾಗೇವಾಡಿ ಪೋಲಿಸ್ ಅಧಿಕಾರಿಗಳು ಕೂಡಾ ದಲಿತರನ್ನು ನೋಡಿದರೆ ಸಾಕು ಮೈಮೆಲೆ ಹಾವು ಹರಿದಂತೆ ನಡೆದುಕೊಳ್ಳುತ್ತಿದ್ದಾರೆ.ಈ ವಿಡಿಯೋ ಒಂದು ಕುಟುಂಬವನ್ನು ಸುಖಾ ಸುಮ್ಮನೆ ಮನೆಯಿಂದ ಹೊರಹಾಕಿ ತಪಾಸಣೆ ಮಾಡುವ ಅನಿವಾರ್ಯತೆ ಏನಿತ್ತು.
ಆದ್ದರಿಂದ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ದಲಿತ ಕುಟುಂಬಕ್ಕೆ ಬಾಗೇವಾಡಿ ಪೋಲಿಸ್ ಆಗುತ್ತಿರುವ ಕಿರುಕುಳ ತಪ್ಪಿಸಬೇಕು ಹಾಗೂ ಈ ಅಧಿಕಾರಿಗಳನ್ನು ಅಮಾನತ್ತು ಮಾಡಿ ಇಲಾಖಾ ತನಿಖೆಗೆ ಒಳಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿ (ನಾಗವಾರ ಬಣ )ಜಿಲ್ಲಾ ಸಮಿತಿಯ ಸಹಾ ಸಂಚಾಲಕರಾದ ಚೆನ್ನು ಕಟ್ಟಿಮನಿ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.