ಅಫಜಲಪುರ: ರೈತರಿಗೆ ಕಿರುಕುಳ ನೀಡಿ ರೈತರ ತೆರಿಗೆ ವಸೂಲಿ ಮಾಡುತ್ತಿರುವುದು ನಿಲ್ಲಿಸಿ ಪುರಸಭೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ತಹಸಿಲ್ದಾರ, ಪಿಎಸ್ಐ, ಹಾಗೂ ಪುರಸಭೆ ಮುಖ್ಯ ಅಧಿಕಾರಿಗೆ ಮನವಿ ನೀಡಿದರು.
ನಂತರ ರೈತ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ್ ಜಮಾದಾರ್ ಮಾತನಾಡಿ ಅಫಜಲಪುರ ತಾಲೂಕಿನಲ್ಲಿ ದಿನದ ಸಂತೆ ಮತ್ತು ವಾರದ ಸಂತೆಯಲ್ಲಿ ರೈತರಿಗೆ ಕಿರುಕುಳ ನೀಡಿ ಮತ್ತು ರೈತರಲ್ಲಿ ತೆರಿಗೆ ಹಣ ವಸೂಲಿ ಮಾಡುತ್ತಿರುವ ಪುರಸಭೆಯ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ತಾಲೂಕಿನ ಎಲ್ಲಾ ಹಳ್ಳಿಗಳಿಂದ ಬರುವಂತಹ ರೈತರು ಬೆಳೆದ ಹಣ್ಣು ಮತ್ತು ತರಕಾರಿ ಅಫಜಲಪುರ ಪಟ್ಟಣದ ದಿನದ ಸಂತೆ ಮತ್ತು ವಾರದ ಸಂತೆಯಲ್ಲಿ ತಂದು ಮಾರಾಟ ಮಾಡುವರು ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.
ಇನ್ನು ಪುರಸಭೆ ಗುತ್ತಿಗೆದಾರರು ತಮ್ಮ ಮನ ಬಂದಂತೆ ರೈತರಿಗೆ ಹಿಂಸೆ ನೀಡಿ ಕರವಸೂಲಿ ಮಾಡುತ್ತಿದ್ದಾರೆ. ರೈತರು ತೆಗೆದುಕೊಂಡು ಬಂದಂತಹ ಹಣ್ಣು ಮತ್ತು ತರಕಾರಿಗಳಿಗೆ ಹಣ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಹಣ ವಸೂಲಿ ಮಾಡುವುದು ತಡೆಗಟ್ಟದೆ ಇದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿಧ ಸಂಘಟನೆಗಳು ಒಗ್ಗೂಡಿ ಇದೆ ದಿನಾಂಕ 20.03.2023 ಬೆಳಗ್ಗೆ 4:00ಗೆ ಪುರಸಭೆ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಬಳಿ ಉಗ್ರ ಹೋರಾಟ ಮಾಡಲಾಗು
ವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಗೋಳೆ , ದತ್ತು ಎಸ್ ಪೂಜಾರಿ, ಶಿವಾನಂದ ಚಿನ್ಮಳ್ಳಿ, ಶ್ರೀಶೈಲ್ ಕಲಕೇರಿ, ಮಡಿವಾಳ ಕಲಶೆಟ್ಟಿ, ಶ್ರೀಶೆೄಲ್ ರೆಡ್ಡಿ, ಕಲ್ಯಾಣಿ ಚಲಗೆರಿ ಹಾಗೂ ಇತರರು ಇದ್ದರು..
ವರದಿ: ಉಮೇಶ್ ಅಚಲೇರಿ ಅಫಜಲಪುರ