ದೇಶಭಕ್ತಿ ಜಾಗೃತಿಗಾಗಿ ಹರ್ ಹರ್ ಘರ್ ತಿರಂಗಾ ಕಾರ್ಯಕ್ರಮ ಭಾರತೀಯರ ಮನ ಗೆದ್ದಿದೆ : ಸಚಿವ ಅಪ್ಪಾಸಾಹೇಬ್
ಇಂಡಿ : ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಂದ ಹರ್ ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರ್ಯಾಲಿ ನಡೆಸಿದರು.
ಮಂಗಳವಾರ ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮಾರ್ಗದಲ್ಲಿರುವ ಶಿವಾಜಿ ವೃತದಿಂದ ಬೈಕ್ ರ್ಯಾಲಿ ಪ್ರಾರಂಭಿಸಿ, ಮಹಾವೀರ ವೃತ್, ಡಾ. ಬಿ ಆರ್ ಅಂಬೇಡ್ಕರ್ ವೃತ್, ಬಸವೇಶ್ವರ ವೃತ್ ಮೂಲಕ ವಿಜಯಪುರ ರಸ್ತೆಯ ಮಾರ್ಗದಲ್ಲಿರುವ ಸಂತ ಸೇವಾಲಾಲ ವೃತ್ ದವರೆಗೆ ಹಾಗೂ ನಗರದ ಪ್ರಮುಖ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಮಾತನಾಡಿದ ಅವರು, ರಾಜ್ಯದಾದ್ಯಂತ ಬಿಜೆಪಿ ಪಕ್ಷ ಯುವ ಮೂರ್ಚಾ ವತಿಯಿಂದ ತಿರಂಗಾ ಯಾತ್ರೆ ನಡೆಯುತ್ತಿದ್ದು, ಅದರಂತೆ ಇಂಡಿ ತಾಲ್ಲೂಕಿನ ಬಿಜೆಪಿ ಮಂಡಳವತಿಯಿಂದ ಇಂದು ನೂರಾರು ಕಾರ್ಯಕರ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಮೊಳಗಿಸಿ ಬೈಕ್ ರ್ಯಾಲಿ ನಡೆಸಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ವೀರ ಸಾವರಕರ ಸೇರಿದಂತೆ ಅನೇಕ ಮಹನೀಯರು ತಮ್ಮ ಜೀವನವನ್ನೇ ಮುಡುಪಾಗಿರಿಸಿದ್ದರು. ಕಠಿಣ ಜೈಲು ಶಿಕ್ಷೆ ಅನುಭವಿಸಿದರು.
ಅವರೆಲ್ಲರ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ, ದೇಶಭಕ್ತಿ ಎನ್ನುವುದು ನಮ್ಮ ಉಸಿರಾಗಬೇಕು, ದೇಶಭಕ್ತಿ ಜಾಗೃತಿಗಾಗಿ ಹರ್ ಹರ್ ಘರ್ ತಿರಂಗಾ ಕಾರ್ಯಕ್ರಮ ಭಾರತೀಯರ ಮನ ಗೆದ್ದಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮೂರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ, ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಕಾಸುಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ,ಅನೀಲ ಜಮಾದಾರ, ರಾಘವೇಂದ್ರ ಕಾಪಸೆ, ರಾಜು ಬಡಿಗೇರ, ಅನೀಲಗೌಡ ಬಿರಾದಾರ, ಸಿದ್ಧಲಿಂಗ ಹಂಜಗಿ, ರಾಜಕುಮಾರ ಸಗಾಯಿ,ದೇವ ದೇವೇಂದ್ರ ಕುಂಬಾರ, ಸಂತೋಷಗೌಡ ಪಾಟೀಲ, ಅಶೋಕ ಅಕಲಾದಿ, ಅಶೋಕಗೌಡ ಬಿರಾದಾರ, ಮಂಜು ದೇವರ, ಶೀವು ಬಗಲಿ, ಶ್ರೀಶೈಲಗೌಡ ಪಾಟೀಲ, ಸೋಮು ನಿಂಬರಗಿಮಠ, ವಜ್ಜು ಕುಡಿಗನೂರ,ರಾಮಸಿಂಗ್ ಕನ್ನೂಳ್ಳಿ, ಪುಟ್ಟುಗೌಡ ಪಾಟೀಲ,ಆದಿತ್ಯ ಶಿಂದೆ, ಶಾಂತು ಕಂಬಾರ, ಬಾಗೇಶ್ ಮಲಗಾಣ,ಪಿಂಟು ಲಾಳಸಂಗಿ, ಪ್ರಶಾಂತ ಗೌಳಿ, ಭತ್ತುಸಾಹುಕಾರ ಹವಳಗಿ,ವಿಜು ಮಾನೆ, ವಿಜುಗೌಡ ಪಾಟೀಲ,ರಾಜಕುಮಾರ ಯರಗಲ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.