ವಿಶ್ವ ಕೈ ತೊಳೆಯುವ ದಿನ ಸ್ವಚ್ಚತೆಗೆ ಮೊದಲ
ಆದ್ಯತೆ ನೀಡಿ.
ಇಂಡಿ: ಅಸ್ವಚ್ಚತೆಯ ಕಾರಣದಿಂದ ಸಾಂಕ್ರಾಮಿಕ
ರೋಗಗಳಿಗೆ ಅನೇಕರು ತುತ್ತಾಗುತ್ತಿದ್ದಾರೆ. ಆದ್ದರಿಂದ ಎಲ್ಲರೂ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಸುನಂದಾ ಅಂಬಲಗಿ ಹೇಳಿದರು. ಶನಿವಾರ ತಾಲೂಕಿನ ಹಂಜಗಿ ಗ್ರಾಮದಲ್ಲಿ ವಿಶ್ವ ಕೈ ತೊಳೆಯುವ ದಿನ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೈಗಳು ತೋಳೆಯುವುದರಿಂದ ಸೋಂಕು ಮತ್ತು
ರೋಗಗಳನ್ನು ತಡೆಯಬಹುದು. ಸಾರ್ವಜನಿಕರ
ಆರೋಗ್ಯ ಹಿತದೃಷ್ಟಿಯಿಂದ ಕೈ ತೊಳೆಯುವದು
ಬಹಳ ಪ್ರಮುಖವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳು ಮುಟ್ಟಿದಾಗ ಆಗಾಗ ಕಣ್ಣು, ಮೂಗು, ಬಾಯಿ
ಸ್ಪರ್ಶಿಸುತ್ತದ್ದರೆ ಅಡುಗೆ ಮಾಡುವ ಮೊದಲು
ಶೌಚಾಲಯಕ್ಕೆ ಹೋಗಿ ಬಂದ ನಂತರ. ಸೇಹಿತರಿಗೆ ಹ್ಯಾಂಡ ಶೇಖ ಕೊಟ್ಟ ಬಳಿಕ ಕೈ ತೋಳೆಯಬೇಕು ಇಲ್ಲವಾದರೆ ವೈರಾಣು ಇರುವ ಕೈಗಳಿಂದ ಮೂಗು, ಬಾಯಿ ಮುಟ್ಟಿಕೊಳ್ಳುವುದರಿಂದ ಶೀತ, ಮನಂಜೆಟಿಸ್,
ಹೆಪಟೈಟಸ್, ಮತ್ತು ಅತೀ ಸಾರದಂತಹ ತೀವ್ರತರವಾದ
ಸೋಂಕು ಹರಡಬಹುದು ಜೊತೆಗೆ ಇತರರಿಗೂ ವೈರಾಣು
ಹರಡಿಸುತ್ತದೆ. ಕೈಗಳು ತೋಳೆಯುವುದರಿಂದ ಶೇಕಡಾ 40 ರಷ್ಟು ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯಬಹುದು. ಶೇಕಡಾ 57ರಷ್ಟು ಜಠರ ಕರುಳಿನ
ಸಮಸ್ಯೆಯನ್ನು ತಡೆಯಬಹುದು. ಉಸಿರಾಟದ ಕಾಯಿಲೆ
ಮತ್ತು ಸೋಂಕುಗಳ ಕಾಯಿಲೆ ಮತ್ತು ಸೋಂಕುಗಳನ್ನು 21 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿರೇಶ ಹಿರೇಮಠ (ಹೆಚ್.ಆಯ್.ಓ)
ಮತ್ತು ಆಶಾ ಕಾರ್ಯಕರ್ತೆಯರು, ಮಹಿಳೆಯರು
ಮತ್ತು ಮಕ್ಕಳು ಭಾಗವಹಿಸಿದ್ದರು.