ಇಂಡಿ: ಸರ್ಕಾರ ಸಚಿವ ಸಂಪುಟ ರಚನೆ ಮಾಡುವ ಸಂದರ್ಭದಲ್ಲಿ ಕೆ ಎಸ್ ಈಶ್ವರಪ್ಪ ಕಾರ್ಯನಿರ್ವಹಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಕುರುಬ ಸಮುದಾಯದ ವಿಧಾನ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ್ ರವರಿಗೆ ನೀಡಬೇಕು ಎಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯ ತಾಲ್ಲೂಕು ಅದ್ಯಕ್ಷರಾದ ಹಣಮಂತ ಕಾಳೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಹಿಂದುಳಿದ ಕುರುಬ ಸಮುದಾಯವನ್ನು ಹಾಗೂ ಸಮುದಾಯದ ನಾಯಕರನ್ನು ಪದೇ ಪದೇ ಕಡೆಗಣಿಸುತ್ತಿರುವುದನ್ನು ಸಮುದಾಯ ಗಮನಿಸುತ್ತಿದೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹೆಚ್ ವಿಶ್ವನಾಥ್ ಅವರು ಹೋರಾಟಗಾರರು. ಅನುಭವ ಹೊಂದಿದ ಹಿರಿಯ ರಾಜಕಾರಣಿಗಳು. ಹಿಂದುಳಿದ ಹಾಗೂ ದಲಿತರ ಪರವಾಗಿ ಹೋರಾಟ ಮಾಡಿದವರು. ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಸ್ಥಾನ ಸರ್ಕಾರ ನೀಡುವ ಮೂಲಕ ಕೆ ಎಸ್ ಈಶ್ವರಪ್ಪನವರ ಸ್ಥಾನ ತುಂಬಲು ಅವಕಾಶ ಮಾಡಿಕೋಡಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೆ ಕುರುಬ ಸಮುದಾಯದ ಹಿರಿಯರು ಹಾಗೂ ಯುವ ಶಕ್ತಿ ಸೇರಿಕೊಂಡು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಹೆಚ್ ವಿಶ್ವನಾಥ್ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಯಲ್ಲಿ ಕೈ ಜೋಡಿಸಿದ್ದಾರೆ ಎಂದರು.