ಗುತ್ತಿಬಸವಣ್ಣ ಹೋರಾಟಗಾರ ರೈತ ಮಿತ್ರ ಕೆಂಗನಾಳ :ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ
ಇಂಡಿ : ಈ ಭಾಗದ ದಶಕಗಳ ಶ್ರಮದ ಕನಸು ಗುತ್ತಿಬಸವಣ್ಣ ಕಾಲುವೆಗೆ ನೀರು ತರುವ ಹೋರಾಟದ ರೂವಾರಿ ಹಾಗೂ ಲಿಂಬೆ ನಾಡಿನ ರೈತರ ಪ್ರಮುಖ ಬೆಳೆ ಲಿಂಬೆಗೆ ಶಾಶ್ವತ ದರ ನಿಗದಿ ಮಾಡುವ ರೈತರ ಹತ್ತು ಹಲವು ಬೇಡಿಕೆಗಳನ್ನು ಹೊತ್ತು ಅವರ ಕರೆಗೆ ದ್ವನಿಯಾಗಿ ನಿಂತ ಹೋರಾಟಗಾರ ತಾಂಬಾ ಜಿಲ್ಲಾ ಪಂಚಾಯತ ಕ್ಷೇತ್ರದ ಬಿಜೆಪಿ ಯುವ ಮುಖಂಡ ಶಿವರಾಜ್ ಮಲ್ಲಪ್ಪ ಕೆಂಗನಾಳ ಅವರಿಗೆ ಇಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ ಕೋಚಬಾಳ ಅವರ ಸಲಹೆ ಮುಖಾಂತರ ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಶಿವರಾಜ್ ಕೆಂಗನಾಳ ಅವರನ್ನು ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಅದೇಶಿಸಿರುತ್ತಾರೆ.
ಆಯ್ಕೆ ಮಾಡಿರುವದಕ್ಕೆ ತಾಂಬಾ ಗ್ರಾಮದ ಬಿಜೆಪಿ ಮುಖಂಡರಾದ ಮಾಜಿ ತಾಲೂಕು ಪಂಚಾಯತ ಸದಸ್ಯ ಪ್ರಕಾಶ ಮುಂಜಿ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ರಾಜಶೇಖರ ಗಂಗನಳ್ಳಿ, ಉಪಾಧ್ಯಕ್ಷ ನಾಟೀಕಾರ, PLD ಬ್ಯಾಂಕ ನಿರ್ದೇಶಕ R S ಪೂಜಾರಿ, ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಪರಶುರಾಮ ಭರಮಣ್ಣ, ಗ್ರಾಮ ಪಂಚಾಯತ ಸದಸ್ಯ ಬಸವರಾಜ ಸರಸಂಬಿ, ಬಿಜೆಪಿ ಮುಖಂಡ ಶ್ರೀಶೈಲ ನಿಂಗಮನಿ, ಸುರೇಶ ನಡಗಡ್ಡಿ ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಶಂಕರ ಯಳಕೋಟಿ ಸಿಹಿ ತಿನಿಸಿ ಅಭಿನಂದನೆಗಳು ತಿಳಿಸಿದ್ದಾರೆ.