2006ರಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಯಾಗಿದ್ದ ತಾವು ತಾಂಬಾ ಗ್ರಾಮಕ್ಕೆ ಆಗಮಿಸಿ ಕಾಲುವೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಕೊಟ್ಟು ಅದನ್ನು ಪೂರ್ಣಗೊಳಿಸಿದ್ದಿರಿ. ಆದರೆ ಈಗ ನೀವೆ ಇದಕ್ಕೆ ಪರಿಹಾರ ಸೂಚಿಸಿ ಎಂದು ಹೇಳಿದರು. ಗುತ್ತಿಬಸವಣ್ಣ ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ ಮಾಶೀಮ ವಾಲಿಕಾರ ಜೊತೆಗೂಡಿ ಮಾಜಿ ಮುಖ್ಯಮಂತ್ರಿಗಳಿಗೆ ವಿಷಯ ತಿಳಿಸಿ, ಅದಕ್ಕೆ ಕೂಡಲೇ ತಾವುಗಳು ಶಾಶ್ವತ ನೀರಾವರಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.