ಹೌದು ತಾಂಬಾ ಗ್ರಾಮದಲ್ಲಿ ೨೯೫ ನೇ ದಿನಕ್ಕೆ ಕಾಲಿಟ್ಟ ಗುತ್ತಿ ಬಸವಣ್ಣ ಹೋರಾಟಕ್ಕೆ ಬೆಂಬಲ ಸೂಚಿಸಿ ಮಂಗಳಮುಖಿಯರು ಸರ್ಕಾರಕ್ಕೆ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕೊನೆಯ ಎಚ್ಚರಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹೋರಾಟ ಸಮೀತಿ ಸದಸ್ಯ, ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಹಾಗೂ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಯ್ಯ ಫಕೀರಯ್ಯ ಸಾರಂಗಮಠ ಮಾತನಾಡಿದ ಅವರು, ರೈತರು ಶಾಂತಿ ಪ್ರಿಯರು, ಗಾಂಧೀವಾದಿಗಳು 10 ತಿಂಗಳು ಕಳೆದರೂ ಹೋರಾಟ ಅಹಿಂಸಾ ಮಾರ್ಗದ ವಿರೂಪಕ್ಕೆ ತಿರುಗಿಲ್ಲ, ಇದು ಸರ್ಕಾರ ಮೊದಲು ಅರಿಯಬೇಕು. ಕೂಡಲೇ ಸ್ಪಂದಿಸಬೇಕು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ, ಹೋರಾಟ ವೇದಿಕೆಯಲ್ಲಿ ಪ್ರಾಣ ಬಿಡುತ್ತೇವೆ ಎಂದು ಹೇಳಿದರು.
ನಿರಂತರ ಹೋರಾಟಕ್ಕೆ ಸರ್ಕಾರ ಸ್ಪಂದನೆ ಮಾಡಿದೆ. ಆದರೆ ಇನ್ನೂ ಯಾವ ಆದೇಶವು ಕೈಗೆ ಬಂದಿಲ್ಲ. ಹೋರಾಟದ ಬಹುದಿನಗಳ ಬೇಡಿಕೆ ಶಾಶ್ವತವಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕು. ಸರ್ಕಾರ ಕೂಡಲೇ ಆದೇಶದ ಪ್ರತಿಯೊಂದಿಗೆ ಹೋರಾಟದ ವೇದಿಕೆಗೆ ಆಗಮಿಸಿದ್ರೆ ಮಾತ್ರ ಹೋರಾಟ ಕೈಬಿಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳಮುಖಿ ಚಾಂದನಿ ರಾಠೋಡ್, ಸೋನಾಬಯಿ ದೊಡ್ಮನಿ, ನಾಗಮ್ಮ ಬೀಳಳ, ಪ್ರಾರ್ಥನಾ ಅಂಬಿಗೇರ, ವಂದನಾ ವಜ್ರಮುನಿ, ಲಕ್ಷ್ಮೀ ಚವಾಣ, ಕಾಜಲ್ ಹಿರೇಮಠ್, ಸಾಕ್ಷಿ ತಿಕೋಟಾ, ಸೈನಜ ಜಾತಕರ, ಅಮೃತ ಬಿಜಾಪುರ್, ರಾಣಿ ಸಾಂಗಲಿ, ಅರ್ಚನಾ ಪೂಜಾರಿ, ಪಲ್ಲವಿ ಜಂಬಗಿ ಇನ್ನೂ ಅನೇಕ ತೃತೀಯ ಲಿಂಗಿಗಳು ಇದ್ದರು.