ಇಂಡಿ: ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುವಿಗಿಂತ ಹೆಚ್ಚಿನ ಸಾಧನೆ ಮಾಡಿದರೆ ಅದೇ ಗುರುವಿಗೆ ನೀಡುವ ಮಹತ್ವದ ಗುರುಕಾಣಿಕೆ. ಹೆತ್ತ ತಾಯಿ ಹೊತ್ತ ನಾಡನ್ನು
ಎಂದೂ ಮರೆಯಬಾರದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಧರ ನಡಗಡ್ಡಿ ಹೇಳಿದರು.
ಅವರು ತಾಲೂಕಿನ ತಾಂಬಾ ಗ್ರಾಮದ ಶ್ರೀ
ಸಂಗನಬಸವೇಶ್ವರ ಪ್ರೌಢ ಶಾಲೆಯ 1998-
99ನೇ ಬ್ಯಾಚಿನ ಹಳೆಯ ವಿದ್ಯಾರ್ಥಿಗಳಿಂದ
ಪ್ರೊಜೆಕ್ಟರ್ ಕೊಡುಗೆ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಪಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ
ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುವ ಗುರುಗಳಿಗಾಗಿ ಗುರುವಂದನೆ ಕಾರ್ಯಕ್ರಮ ಆಯೋಜಿಸಿರುವದು ಹಾಗೂ ಪ್ರೊಜೆಕ್ಟರ್ ಕೊಡುಗೆಯಾಗಿ ನೀಡಿರುವದು
ಶ್ಲಾಘನಿಯ ಎಂದರು.
ಶ್ರೀಶಾಂತೇಶ್ವರ ಬ್ಯಾಂಕಿನ ವ್ಯವಸ್ಥಾಪಕ ಬಸವರಾಜ ರೊಟ್ಟಿ ಮಾತನಾಡಿ, ಈ ಭಾಗದ ಬಡಮಕ್ಕಳಿಗೆ ಕಾಮದೇನು ಕಲ್ಪವೃಕ್ಷವಾದ ಶ್ರೀ ಸಂಗನಬಸವೇಶ್ವರ ವಿದ್ಯಾ ಸಂಸ್ಥೆಯಿಂದ ಎಷ್ಟೋ ಮಕ್ಕಳು ತಮ್ಮ ಬಾಳನ್ನು
ಉಜ್ವಲಗೊಳಿಸಿಕೊಂಡಿದ್ದಾರೆ ಎಂದರು. ನಿವೃತ್ತ ಶಿಕ್ಷಕ ಜೆ.ಆರ್. ಪೂಜಾರಿ, ಶಿಕ್ಷಕಿ ಪಿ.ಬಿ. ಕಾಡಯ್ಯನಮಠ,
ಮುಖ್ಯ ಗುರುಗಳಾದ ಎಸ್.ಎಮ್. ಚವ್ಹಾಣ, ಯುವರಾಜ ಪಡಗಣ್ಣವರ, ಜಿ.ಎಸ್. ಹಿರೇಮಠ ಮಾತನಾಡಿದರು.
ನಿವೃತ್ತ ಶಿಕ್ಷಕ ಎಸ್.ಸಿ. ನಿಂಬಾಳ ಪ್ರೊಜೆಕ್ಟರ್
ಉದ್ಘಾಟಿಸಿದರು. ಸಂಸ್ಥೆಯ ಚೇರಮನ್ ಈರಣ್ಣ
ಕಿಣಗಿ ಅಧ್ಯಕ್ಷತೆವಹಿಸಿದ್ದರು. ಪ್ರಾಚಾರ್ಯ ಸಿ.ಎಸ್.
ಕಣಮೇಶ್ವರ, ಮಲಕಪ್ಪ ಸೋಮನಿಂಗ, ಪರಸು ಪಾಟೀಲ, ಬಾಬು ಕನೋಜಿ, ಆಯ್.ಸಿ. ಕಂಬಾರ, ರವಿ
ಸಂಬಾಜಿ, ಮಹಂತೇಶ ಸೂರಪುರ, ಸುನಂದಾ ಮುಂಜಿ, ಗೀತಾ ಹಚ್ಚಡದ, ಲಕ್ಷ್ಮೀ ಪಡಗಣ್ಣವರ, ಶ್ರೀದೇವಿ ಗಂಗನಳ್ಳಿ, ಶ್ರೀದೇವಿ ನಸಲಿ, ನಾಗರಾಜ ಭರಮಣ್ಣ ಮತ್ತಿತರಿದ್ದರು.
ಇಂಡಿ: ಶ್ರೀ ಸಂಗನಬಸವೇಶ್ವರ ಪ್ರೌಢ ಶಾಲೆಯ 1998-99ನೇ ಬ್ಯಾಚಿನ ಹಳೆಯ ವಿದ್ಯಾರ್ಥಿಗಳಿಂದ ಪ್ರೊಜೆಕ್ಟರ್ ಕೊಡುಗೆ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು.