ಇಂಡಿ: ಬಬಲಾದಿಯ ಅರ್ಥಾರ್ಥ ಸಾರವಾಡದ ಕಾಲಜ್ಞಾನ ಬಹಳ ಅದ್ಭುತವಾದದ್ದು, ಈ ಭವ್ಯ ಪರಂಪರೆಯ ಮೂಲಪುರುಷನೇ ಸಾರವಾಡದ ಚಿಕ್ಕಪ್ಪಯ್ಯ ಎಂದು ನಾಗಠಾಣದ ಉದಯಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಶುಕ್ರವಾರ ತಾಲೂಕಿನ ಚಿಕ್ಕಬೇವನೂರ ಗ್ರಾಮದಲ್ಲಿ
ಹಮ್ಮಿಕೊಂಡ ಶ್ರೀ ಗುರು ಚಕ್ರವರ್ತಿ ಓಂಕಾರಯ್ಯ
ಮುತ್ಯಾ ಸಾರವಾಡ ಅವರ ನೂತನ ಕ್ಯಾಲೆಂಡರ್
ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾರವಾಡದ ಅಧಿದೇವತೆ ಚಿಕ್ಕಪ್ಪಯ್ಯ ಮೊಟ್ಟಮೊದಲು
ಕಾಲಜ್ಞಾನದ ಹಾಡುಗಳನ್ನು ಬರೆದು ಶ್ರೀಕಾರ
ಹಾಕಿದರು. ನಂತರ ಈ ಪರಂಪರೆಯನ್ನು ಆತನ
ಕೃಪಾಪುತ್ರ ಸದಾಶಿವ ಮುತ್ಯ ಮುಂದುವರೆಸಿಕೊಂಡು
ಬಂದು ಕಾಲಜ್ಞಾನದಲ್ಲಿ ಅವರು ಹೇಳಿದ ನುಡಿಗಳು
ಇಂದಿಗೂ ಸತ್ಯವಾಗಿದೆ ಎಂದು ಹೇಳಿದರು.
ಮುಖಂಡ ವಿಜಯಕುಮಾರ ಜಂಬಗಿ ಮಾತನಾಡಿ, ಗ್ರಾಮದಲ್ಲಿ ಗುರು ಚಕ್ರವರ್ತಿ ಸದಾಶಿವ ಮುತ್ಯ ಮತ್ತು
ತ್ರಿಕಾಲಜ್ಞಾನಿ ಚಿಕ್ಕಪ್ಪಯ್ಯನವರ ಮೂರ್ತಿ ಪ್ರತಿಷ್ಠಾಪನೆ
ಮಾಡಿ ಮಠವನ್ನು ನಿರ್ಮಾಣ ಮಾಡಲಾಗುವುದು,
ಸದ್ಭಕ್ತರು ತನು-ಮನದಿಂದ ಧನ ಸಹಾಯ ಮಾಡಿ
ಭವ್ಯ ಮಠದ ನಿರ್ಮಾಣದಲ್ಲಿ ತಮ್ಮ ಕೊಡುಗೆ
ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವೇದಮೂರ್ತಿ ಕಲ್ಲಯ್ಯ ಹಿರೇಮಠ,
ಪರಮೇಶ್ವರ ಮಠಪತಿ, ಗ್ರಾಮ ಪಂಚಾಯತಿಯ
ಅಧ್ಯಕ್ಷ ಸುನೀಲ ಚೌವ್ಹಾಣ, ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಹೇಬ ಹೊಸಮನಿ, ಗುರಪ್ಪ ಜಾಮುಗೊಂಡಿ, ಚಿದಾನಂದ ಮದರಖಂಡಿ, ವಿವೇಕಾನಂದ ಚೋರಗಿಮಠ, ಮಡಿವಾಳಪ್ಪ ದೇಸಾಯಿ, ಅಶೋಕ ಅಗಸರ, ಧರಪ್ಪ ಜಾಮಗೊಂಡಿ, ಶಿವಾನಂದ ವರವಂಟಿ, ಧರೆಪ್ಪ ಮದರಖಂಡಿ, ರಾಮಸಿಂಗ್ ಕನ್ನೊಳ್ಳಿ, ಮಲ್ಲಿಕಾರ್ಜುನ ಬಿರಾದಾರ, ಸಂಜೀವ ದಶವಂತ ,ಹಣಮಂತ ವರವಂಟಿ, ವಿರೇಶ ಶಿವೂರ, ಸಿದ್ದಣ್ಣ ಬೋಳಕೋಟಗಿ, ಶ್ರೀಶೈಲ ಮುಟಗೇರ, ಶಿವಾನಂದ ಕರ್ಕಿ, ಪ್ರಭು ಜಾಮಗೊಂಡಿ ಇತರರು ಉಪಸ್ಥಿತರಿದ್ದರು.