ವಡಗೇರಾ : ತಾಲೂಕಿನ ಗುಂಡ್ಲೂರು-ಸಂಗಮ ಸೇತುವೆ ಕಾಮಗಾರಿಯ ಪರಿಣಾಮ ಅದರ ಹಿನ್ನೀರಿನಿಂದಾಗಿ ಉಂಟಾದ ಸಾಕಷ್ಟು ಬೆಳೆ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಹಮ್ಮಿಕೊಂಡ ಸತ್ಯಾಗ್ರಹಕ್ಕೆ ಬೆಂಬಲಿಸಿ ಸೂಕ್ತ ಪರಿಹಾರಕ್ಕಾಗಿ ಹಾಗೂ ಸೇತುವೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ರೈತರ ಭೂಮಿಗಳಿಗೆ ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ ರೈತರ ಮುಖಂಡರಾದ ಬಾಷುಮಿಯಾ ವಡಗೇರಾ ಆಗ್ರಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಜಾ ಕುಮಾರ ನಾಯಕ, ಭೀಮಣ್ಣ ಮೇಟಿ, ಈಶಪ್ಪ ಗೌಡ, ಪಂಚಾಯಿತಿ ಅಧ್ಯಕ್ಷ ಸಂದೀಪ್ ರೆಡ್ಡಿ, ಯುವ ಮುಖಂಡ ಶ್ರೀನಿವಾಸ್ ಕಲಾಲ್, ರಿಯಾಜ್ ಬಂಡೆ, ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ತಂಡಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.