ವಿಜಯಪುರ : ಅಕ್ರಮವಾಗಿ ಗನ್ ಇಟ್ಟುಕೊಂಡು ಏನೋ ಪ್ಲಾನ್ ಮಾಡಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಒಂದು ಕಂಟ್ರಿ ಪಿಸ್ತೂಲ್ ಹಾಗೂ ಒಂದು ಜೀವಂತ ಗುಂಡು ಜಪ್ತಿಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಕುಮಟಗಿ ತಾಂಡಾದಲ್ಲಿ ನಡೆದಿದೆ. ನರಸಿಂಗ್ ಹಣಮಂತ ಪವಾರ್, ಸತೀಶ ರಾಮು ರಾಠೋಡ, ರಾಜು ಕೇಸು ರಾಠೋಡ, ಪ್ರಕಾಶ ಶಂಕರ ರಾಠೋಡ ಬಂಧಿತ ಆರೋಪಿಗಳು. ಇನ್ನು ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿರುವ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 50 ಸಾವಿರ ಮೌಲ್ಯದ ಒಂದು ಕಂಟ್ರಿ ಪಿಸ್ತೂಲ್, 500 ರೂಪಾಯಿ ಮೌಲ್ಯದ ಒಂದು ಜೀವಂತ ಗುಂಡು, 3.5 ಲಕ್ಷ ಮೌಲ್ಯದ ಒಂದು ಕಾರ್, ಒಂದು ಜೀಪ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಆನಂದಕುಮಾರ ಮಾಹಿತಿ ನೀಡಿದರು.