ವಿಜಯಪುರ : ಮಹಾನಗರ ಪಾಲಿಕೆ ಕಾಂಗ್ರೆಸ್‌ನಲ್ಲಿ ಭಾರೀ ಕುತೂಹಲ ಕೆರಳಿಸಿದ ಅಭ್ಯರ್ಥಿಗಳ ಲಿಸ್ಟ್ ಸೋಮವಾರ ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಕೈ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಸೇರಿದಂತೆ 35 ವಾರ್ಡ್‌ಗಳ ಲಿಸ್ಟ್ ಹೊರ ಬಂದಿದೆ.
ಮಹಾನಗರ ಪಾಲಿಕೆಯ ಮೊದಲ ಮೇಯರ್‌ಗೆ ವಾರ್ಡ್ ಬದಲಾವಣೆ ಮಾಡಲಾಗಿದೆ. ಅಲ್ಲದೇ, ಲಿಸ್ಟ್ ನಲ್ಲಿ ಮತ್ತೇ ನಾಲ್ಕು ಅಭ್ಯರ್ಥಿಗಳ ಹೆಸರು ಬದಲಾವಣೆ ಮಾಡಲಾಗಿದೆ.
ವಾರ್ಡ್ ನಂಬರ 3 ಸೂರ್ಯವಂಶಿ, ವಾರ್ಡ್ ನಂಬರ 19 ಶ್ರೀಮತಿ ಮೋದಿ, ವಾರ್ಡ್ ನಂಬರ 26 ಸಜ್ಜಾದೇಪೀರಾ ಮುಶ್ರಿಫ್, ವಾರ್ಡ್ ನಂಬರ 29 ದನರಾಜ್ ಎಗೆ ಚೇಂಜ್ ಮಾಡಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಆದೇಶ ಹೊರಡಿಸಿದ್ದಾರೆ.