ಇಂಡಿಯಲ್ಲಿ ಗೃಹಲಕ್ಷ್ಮೀಗೆ ಕರಿ ಛಾಯೆಯ ಗೋಳು..!
ಇಂಡಿ : ಗೃಹಲಕ್ಷ್ಮೀ ತಾಂತ್ರಿಕ ಸಮಸ್ಯೆ ಸ್ಥಳದಲ್ಲಿಯೇ ಪರಿಹರಿಸಲು ಮಾಡಿರುವ ವಿಶೇಷ ಶಿಬಿರ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪುರಸಭೆಯಲ್ಲಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ತಾಂತ್ರಿಕ ಸಮಸ್ಯೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಕಛೇರಿಗಳಲ್ಲಿ ಡಿ.27 ಬುಧವಾರ ರಿಂದ ಡಿ-29 ರವರೆಗೆ 3 ದಿನಗಳ ಕಾಲ ವಿಶೇಷ ಶಿಬಿರ ಆಯೋಜಿಸಲಾಗಿದೆ. ಅದಕ್ಕಾಗಿ ಡಿ-27ರಂದು ಇಂಡಿ ಪಟ್ಟಣದ ಪುರಸಭೆಯಲ್ಲಿ ನಡೆದಿದೆ. ಆದ್ರೇ, ಸುಮಾರು ಜನರು ತಮ್ಮ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆಗಮಿಸಿದ್ದಾರೆ. ಈ ವಿಶೇಷ ಶಿಬಿರಗೆ ಸಂಬಂಧಿಸಿದ ಯಾರೊಬ್ಬರೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಬಾರದೆ ಇದ್ದಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ಗೃಹಲಕ್ಷ್ಮೀ ಯೋಜನೆಯ ನಿರಿಕ್ಷೀತ ಫಲಾನುಭವಿಗಳು ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 3 ಘಂಟೆಗೆ ವರಗೆ ಕಾಯಿದು ಅಧಿಕಾರಗಳ ವಿರುದ್ಧ ಹಿಡಿಶಾಪ್ ಹಾಕಿದ್ದಾರೆ. ಅದಲ್ಲದೇ ಸರಕಾರದ ಕಾಯಿದೆ ಮತ್ತು ಕಾನೂನು ಉಲ್ಲಂಘನೆ ಮಾಡಿದ್ದು, ಜಿಲ್ಲಾ ಅಧಿಕಾರಿ ಆದೇಶಕ್ಕೂ ಗೌರವ ಕೊಡದ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಒತ್ತಾಯಿಸಿದ್ದಾರೆ.