ಅಗರಖೇಡ ಗ್ರಾ.ಪಂ ಗೆ ಬೀಗ ಹಾಕಿ ಪ್ರತಿಭಟನೆ
ಇಂಡಿ ತಾಲ್ಲೂಕಿನಲ್ಲಿ ಗ್ರಾ.ಪಂ ಗೆ ಬೀಗ ಜಡಿದು ಪ್ರತಿಭಟನೆ..! ಅಯ್ಯೋ ಕಾರಣ ಗೊತ್ತಾ..?
ಇಂಡಿ : ತಾಲೂಕಿನ ಅಗರಖೇಡ ಗ್ರಾ.ಪಂ ಗೆ ಗ್ರಾಮಸ್ಥರು ಬೀಗ ಹಾಕಿ , ಮುಳ್ಳು ಹಚ್ಚಿ ಸಿಬ್ಬಂದಿಯನ್ನು ಹೊರಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ವಾರ್ಡ ನಂ ೧ ರಲ್ಲಿ ರಸ್ತೆ ಸುಧಾರಣೆ, ಇಲ್ಲದೆ ಜನರು ನಡೆದಾಡುವದಕ್ಕೂ ತುಂಬಾ ತೊಂದರೆ ಯಾಗುತ್ತಿದೆ. ಹಾಗೂ ಯಾವದೇ ವಾಹನಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗುತ್ತಿಲ್ಲ. ಮತ್ತು ಕುಡಿಯುವ ನೀರಿನ ತೊಂದರೆ ತೊಂದರೆ ಇದೆ, ವ್ಯವಸ್ಥೆ ಸರಿಯಾಗಿ ಇಲ್ಲ ಹೆಣ್ಣು ಮಕ್ಕಳು ಬಹಿರ್ದೇಶೆಗೆ ಹೋಗಲು ತುಂಬಾ ತೊಂದರೆ ಇದೆ.
ಗ್ರಾಮಸ್ಥರು ಹಲವಾರು ಭಾರಿ ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ಮನವಿ ಮಾಡಿದರೂ ಗ್ರಾ.ಪಂ ದವರು ಸ್ಪಂದಿಸುತ್ತಿಲ್ಲ.ಹೀಗಾಗಿ ಸಾರ್ವಜನಿಕರು ಗ್ರಾ.ಪಂ ಬೀಗ ಹಾಕಿ ರಸ್ತೆ ಸಂಚಾರ ಬಂದು ಮಾಡಿ ಪ್ರತಿಬಟನೆ ನಡೆಸಿದರು.
ಬಾಬಾಗೌಡ ಪಾಟೀಲ, ಮೌಲಾ ಬೀಜಲಿ, ಪ್ರಭುಗೌಡ ಪಾಟೀಲ, ತುಕಾರಾಮ ಭೋಸಲೆ, ವಿನಾಯಕ ಪಾಟೀಲ, ತಿಪ್ಪಣ್ಣ ಕೌಲಗಿ, ಯಲ್ಲಾಲಿಂಗ ಕೌಲಗಿ, ಸಮೀರ ಕೋರಬು, ಶ್ರೀಶೈಲ ಪಾರೇಕರ, ಚಂದು ಪಾರೇಕರ,ಇಮಾಮಸಾಬ ಮುಲ್ಲಾ, ಅರುಗೌಡ ಪಾಟೀಲ,ಪ್ರಕಾಶ ಪಾಟೀಲ,ಕಾಂತು ಕೋಟಿ, ಇಮಾಮಸಾಬ ಕೊರಬು,ಆರಿಫ್ ಅಗರಖೇಡ, ಆರೀಫ್ ಮುಲ್ಲಾ ಮತ್ತಿತರಿದ್ದರು.
ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಗ್ರಾಮಸ್ಥರು ಅಗರಖೇಡ ಗ್ರಾ.ಪಂ ಬೀಗ ಹಾಕಿ ಪ್ರತಿಭಟಿಸಿದರು.