ಇಂಡಿ : ಮಹಿಳೆಯರ ಆರ್ಥಿಕ ಸಬಲೀಕರಣದ ವಿಷಯದಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ರಾಜ್ಯ ಸರಕಾರದ ಮಹತ್ವ ಕಾಂಕ್ಷಿಗಳ ಯೋಜನೆಯಲ್ಲಿ ಗೃಹಲಕ್ಷ್ಮೀ ಒಂದಾಗಿದ್ದು, ಬಡ ಹೆಣ್ಣುಕ್ಕಳ ಜೀವನಕ್ಕೆ ಆಸರೆಯಾಗಲಿದೆ ಎಂದು ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಬಸವರಾಜೇಂದ್ರ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರ ಬಿ.ಎಸ್ ಕಡಕಬಾವಿ ಅವರು ಯೋಜನೆ ಕುರಿತು ಮಾತಾನಾಡಿದರು.
ತಾ.ಪಂ ಅಧಿಕಾರಿ ಸುನೀಲ ಮದ್ದಿನ್, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸುಮಂಗಲಾ ಹಿರೇಮಠ, ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಇನ್ನೂ ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಸುದೀರ ಕರಕಟ್ಟಿ, ಮುಸ್ತಾಕ ಅಹ್ಮದ್ ಇಂಡಿಕರ, ಸತೀಶ ಕುಂಬಾರ, ಉಮೇಶ ದೇಗಿನಾಳ ಇದ್ದರು.