ಇಂಡಿ : ಉಪ ವಿಭಾಗ ಕಚೇರಿಯಲ್ಲಿ ಅದಾಲತ್, ಗ್ರಾಹಕರ ಸಂವಾದ ಸಭೆವೂ ಫೆಬ್ರವರಿ 19 ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿ ಹೆಸ್ಕಾಂ ಉಪ ವಿಭಾಗಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇಂಡಿ ಉಪ ವಿಭಾಗದ ಕಚೇರಿಯಲ್ಲಿ ಅಧೀಕ್ಷಕ ಅಭಿಯಂತರರು (ವಿ) ಕಾ ಮತ್ತು
ಪಾ ವೃತ್ತ ಹೆಸ್ಕಾಂ ವಿಜಯಪುರ ರವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಜಾಗೃತ ಹಿತದೃಷ್ಟಿಯಿಂದ ಅದಾಲತ್ ಮತ್ತು ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಂಡಿದ್ದಾರೆ. ಈ ಸಭೆಗೆ ಗ್ರಾಹಕರು ತಮ್ಮ ಕುಂದು ಕೊರತೆಗಳ ಲಿಖಿತ ಅರ್ಜಿಯೊಂದಿಗೆ ಅಹವಾಲನ್ನು ಸಲ್ಲಿಸಲು ಕೋರಲಾಗಿದೆ.