ಮುಷ್ಕರಕ್ಕೆ ಬೆಂಬಲಿಸಲು ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಆನಂದ ಕೆಂಭಾವಿ ಕರೆ..
ಇಂಡಿ: ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಷಡಕ್ಷರಿಯವರ ನೇತೃತ್ವದಲ್ಲಿ ಮಾರ್ಚ್ 01 ರಿಂದ ಕರೆಕೊಟ್ಟಿರುವ ಎಲ್ಲಾ ಸರಕಾರಿ ಸೇವೆ ಮತ್ತು ಸರಕಾರಿ ಶಾಲೆಗೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಹೋರಾಟಕ್ಕೆ ಬೆಂಬಲ ಕೊಡುವಂತೆ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಆನಂದ ಭೀ ಕೆಂಭಾವಿ ಮನವಿ ಮಾಡಿದ್ದಾರೆ.
ಸರಕಾರಿ ನೌಕರರ ಪ್ರಮುಖ ಬೇಡಿಕೆಯಾದ ಸರಕಾರಿ ನೌಕರರು ಮತ್ತು ಸರಕಾರದ ಅದೀನ ನೌಕರರ 7 ನೇ ವೇತನ ಆಯೋಗ ಜುಲೈ 2022 ರಿಂದ ಸರಕಾರಿ ನೌಕರರ ವೇತನದ ಮಧ್ಯಂತರ ಪರಿಹಾರ ಜಾರಿ ಮಾಡಲು ಆದೇಶ ಮಾಡಬೇಕು ಮತ್ತು NPS ರದ್ದು ಮಾಡಿ ಹಳೇಪಿಂಚಣಿ ಮರುಜಾರಿಗೊಳಿಸುವವರೆಗೂ ಎಲ್ಲಾ ತಾಲೂಕಿನಲ್ಲಿರುವ ಎಲ್ಲಾ ನೌಕರರು ತಮ್ಮ ಕರ್ತವ್ಯಕ್ಕೆ ಗೈರುಹಾಜರಾಗಿ ಮುಷ್ಕರಕ್ಕೆ ಬೆಂಬಲ ನೀಡಬೇಕು.ಸರಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ನೌಕರರ ಸಂಘದ ರಾಜ್ಯಧ್ಯಕ್ಷರಾದ ಷಡಕ್ಷರಿ ನೇತೃತ್ವದಿಂದ. ನ್ಯಾಯಯುತವಾದ ಬೇಡಿಕೆಗಳು ಈಡೇರುವವವರೆಗೂ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.